ಸಿನಿಮಾ ಸುದ್ದಿ

ಪಾಕಿಸ್ತಾನ: ಮನೆ ಮುಂದೆ ಗುಂಡಿಟ್ಟು ನಟಿ ಶಮಿಮ್ ಹತ್ಯೆ

Vishwanath S
ಕರಾಚಿ: ಪಾಕಿಸ್ತಾನದ ರಂಗಭೂಮಿ ನಟಿಯನ್ನು ಆಗಂತುಕರು ಗುಂಡಿಟ್ಟು ಹತ್ಯೆಗೈದು ಪರಾರಿಯಾಗಿದ್ದಾರೆ. 
ಮುಲ್ತಾನ್ ನಗರದ ಶಾ ನಗರದಲ್ಲಿ ವಾಸವಿದ್ದ ನಟಿ ಶಮಿಮ್ ಎಂಬುವರನ್ನು ಅವರ ಮನೆ ಮುಂದೆ ಆಗಂತುಕರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಘಟನೆಗೆ ಮುನ್ನ ಶಮಿಮ್ ರನ್ನು ಮನೆಯಿಂದ ಹೊರ ಬರುವಂತೆ ಕೆಲವರು ಕೂಗುತ್ತಿದ್ದರು. ಈ ವೇಳೆ ಮನೆಯಿಂದ ಶಮಿಮ್  ಹೊರಬರುತ್ತಿದ್ದಂತೆ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು 29 ವರ್ಷದ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಶಮಿಮ್ ರನ್ನು ನಟನೆ ವೃತ್ತಿಯಿಂದ ಹಿಂದೆ ಸರಿಯುವಂತೆ ಆಕೆಗ ಇತ್ತೀಚೆಗೆ ಅಪರಿಚಿತರಿಂದ ಬೆದರಿಕೆ ಬಂದಿರುವುದಾಗಿಯೂ ಆತ ಹೇಳಿದ್ದಾರೆ. ಅತ್ಯುತ್ತಮ ನೃತ್ಯಗಾರ್ತಿಯಾಗಿದ್ದ ಶಮಿಮ್ ಅವರು ಶಾಮೊ ಎಂದೇ ಜನಜನಿತರಾಗಿದ್ದರು. 
SCROLL FOR NEXT