ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಇಮ್ರಾನ್ ಸರ್ಧಾರಿಯ ಚಿತ್ರಕ್ಕೆ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಆಯ್ಕೆ

ಸ್ಯಾಂಡಲ್ ವುಡ್ ನ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರನ್ನು ಬೆಳ್ಳಿ ತೆರೆ ಗೆ ಪರಿಚಯಿಸಲು ಸಿದ್ದತೆಗಳು ಪ್ರಾರಂಭವಾಗಿದೆ ಎಂದು .........

ಬೆಂಗಳೂರು: ಸ್ಯಾಂಡಲ್ ವುಡ್ ನ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಅವರನ್ನು ಬೆಳ್ಳಿ ತೆರೆ ಗೆ ಪರಿಚಯಿಸಲು  ಸಿದ್ದತೆಗಳು ಪ್ರಾರಂಭವಾಗಿದೆ ಎಂದು ಗಾಂಧಿನಗರದಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು,  ಅದಕ್ಕೀಗ ಸ್ಪಷ್ಟ ರೂಪ ಸಿಕ್ಕಿದ್ದು ಯುವ ಪ್ರತಿಭೆ ಶ್ರೇಯಸ್,  ನೃತ್ಯ ನಿರ್ದೇಶಕ ಇಮ್ರಾನ್ ಸರ್ಧಾರಿಯಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನೂತನ  ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
ಆದರೆ ಈ ಕುರಿತಂತೆ ಅಧಿಕೃತ ಘೋಷಣೆ ಮಾಡಲು ನಿರ್ಮಾಪಕ ಮಂಜು ಇನ್ನೂ ತಕ್ಕ ಸಮಯಕ್ಕಾಗಿ ಕಾಯುತ್ತಿದ್ದಾರೆ, ಸ್ಕ್ರಿಪ್ಟ್ ಮತ್ತು ಶೂಟಿಂಗ್ ಸಿದ್ಧತೆ ಕೆಲಸಗಳು ವೇಗವಾಗಿ ನಡೆಯುತ್ತಿದ್ದು ನಿರ್ದೇಶಕನೊಂದಿಗಿನ ಚರ್ಚೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಲಾಗುತ್ತದೆ ಎನ್ನಲಾಗಿದೆ. 
ಎಲ್ಲವೂ ಅಂದುಕೊಂದಂತೆಯೇ ನಡೆದಲ್ಲಿ ಶ್ರೇಯಸ್ ಮತ್ತು ನಿರ್ದೇಶಕ ಇಮ್ರಾನ್ ಅವರುಗಳ ಪ್ರಥಮ ಚಿತ್ರದ ಕೆಲಸ ಜ. 2018ರಿಂದ ಪ್ರಾರಂಭಗೊಳ್ಳಲಿದೆ.
 'ಉಪ್ಪು ಹುಳಿ ಖಾರ ' ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿರುವ ಇಮ್ರಾನ್ ಚಿತ್ರಕಥೆಗಾಗಿ ಕೆಲಸ ಮಾಡುತ್ತಿದ್ದಾರೆ, ಇದು ಸುಮಧುರ ಪ್ರೇಮಕಾವ್ಯವಾಗಿದ್ದು ಜತೆಗೆ ಮಾಸ್ ಮನರಂಜನೆಯೂ ಇರಲಿದೆ ಎಂದುಅವರು ವಿವರಿಸಿದರು.
 "ಶ್ರೇಯಸ್ ನ ಪ್ರಥಮ ಚಿತ್ರರೊಮ್ಯಾಂತಿಕ್ ಲವ್ ಸ್ಟೋರಿಯಾಗುವುದರೊಡನೆ ಆಕ್ಷನ್ ಮತ್ತು ಉತ್ತಮ ದೃಷ್ಯಾವಳಿಗಳನ್ನು ಒಳಗೊಳ್ಳಲಿದೆ. ಭಾರತ ಮತ್ತು ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ" ಎಂದು ಚಿತ್ರರಂಗದ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಶ್ರೇಯಸ್ ತನ್ನ ಮೊದಲ ಪ್ರಯತ್ನಕ್ಕೆ ಮುನ್ನ ಸಾಕಷ್ಟು ಆಯ್ಕೆ ನಡೆಸಿದ್ದರು. ಸರಿಯಾದ ಕಥೆ ನಿರ್ಧರಿಸಲು ಸಮಯವನ್ನು ತೆಗೆದುಕೊಂಡಿದ್ದರು. ಅದೇ ವೇಳೆ, ಅವರು ತಮ್ಮ ನಟನಾ ಕೌಶಲ್ಯ ಮತ್ತು ನೃತ್ಯ ತರಬೇತಿ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ: ಭೂಕುಸಿತಕ್ಕೆ ಮುಂಬೈ-ಪುಣೆ ರೈಲು ಸಂಚಾರ ಸ್ಥಗಿತ; ಎಕ್ಸ್‌ಪ್ರೆಸ್‌ವೇ ಬಂದ್, ಸಾವಿರಾರು ಪ್ರಯಾಣಿಕರು ಪರದಾಟ..!

FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೆಯ್ಮಾರ್ ಕಣ್ಣೀರ ವಿದಾಯ! Video

ಮುಂಬೈನಲ್ಲಿ ಮಳೆ ಅವಾಂತರ: ಮನ್ಖುರ್ದ್'ನಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ; 6 ಮಂದಿ ಸಾವು, ಹಲವರು ಸಿಲುಕಿರುವ ಶಂಕೆ..!

ಹಿಜ್ಬುಲ್ಲಾ ವಿರುದ್ಧ ಹೋರಾಟ: ಅಮೆರಿಕಾ ವಿರುದ್ಧವೇ ತಿರುಗಿಬಿದ್ದ ಇಸ್ರೇಲ್; ನಾವು ಒಂಟಿಯಲ್ಲ, ನಮ್ಮ ಹಿಂದೆ 140 ಕೋಟಿ ಮಂದಿ ಭಾರತೀಯರಿದ್ದಾರೆ- JD ವ್ಯಾನ್ಸ್‌ಗೆ ನೆತನ್ಯಾಹು ತಿರುಗೇಟು

61ನೇ ವಯಸ್ಸಿನಲ್ಲೂ ಏನು ಎನರ್ಜಿ! ಮಿಸ್ಟರ್ ಅಂಡ್ ಮಿಸೆಸ್ ಆಗುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಆಮೀರ್ ಖಾನ್, ಗೌರಿ ಸ್ಪ್ರಾಟ್! Video