'ಫಾರ್ಚ್ಯುನರ್' ನಲ್ಲಿ ದಿಂಗತ್, ಸೋನುಗೌಡ 
ಸಿನಿಮಾ ಸುದ್ದಿ

'ಫಾರ್ಚ್ಯುನರ್'ಗಾಗಿ ಒಂದಾದ ದಿಂಗತ್, ಸೋನು ಗೌಡ

ಇಂತಿ ನಿನ್ನ ಪ್ರೀತಿಯ ಖ್ಯಾತಿಯ ನಟಿ ಸೋನುಗೌಡ ಮತ್ತು ಮನಸಾರೆ ಖ್ಯಾತಿಯ ನಟ ದಿಗಂತ್ 'ಫಾರ್ಚ್ಯುನರ್' ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸುತ್ತಿದ್ದಾರೆ.

ಬೆಂಗಳೂರು: ಇಂತಿ ನಿನ್ನ ಪ್ರೀತಿಯ ಖ್ಯಾತಿಯ ನಟಿ ಸೋನುಗೌಡ ಮತ್ತು ಮನಸಾರೆ ಖ್ಯಾತಿಯ ನಟ ದಿಗಂತ್ 'ಫಾರ್ಚ್ಯುನರ್' ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸುತ್ತಿದ್ದಾರೆ.
ನವ ನಿರ್ದೇಶಕ ಜೆ ಮಂಜುನಾಥ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರ ಕೌಟುಂಬಿಕ ಕಥಾಹಂದರವನ್ನು ಹೊಂದಿದ್ದು, ಚಿತ್ರದಲ್ಲಿ ನಟ ದಿಗಂತ್ ಶಾಸಕರ ದೂರ್ತ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರ  ತಂಡ ಒಂದು ಸುತ್ತಿನ ಫೋಟೋ ಶೂಟ್ ಮುಗಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ.

ಸೋನುಗೌಡ ಮತ್ತು ದಿಗಂತ್ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದು, ಈ ಹಿಂದೆಯೇ ಈ ಜೋಡಿ ಇತರೆ ಚಿತ್ರಗಳಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.  ಇದೀಗ 'ಫಾರ್ಚ್ಯುನರ್' ಚಿತ್ರದ ಮೂಲಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಚಿತ್ರತಂಡ ಹೇಳಿಕೊಂಡಿರುವಂತೆ ಚಿತ್ರದ ಒಂದು ಹಾಡಿನ ಚಿತ್ರೀಕರಣವನ್ನು ಹೊರತು ಪಡಿಸಿ, ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರಲ್ಲೇ  ಸಾಗುತ್ತದೆಯಂತೆ.

ಇನ್ನು ಚಿತ್ರದ ಇತರೆ ಪಾತ್ರಗಳಲ್ಲಿ ನಟರಾದ ರತನ್ ರಾಮ್, ಸ್ವಾತಿ ಶರ್ಮಾ ಮತ್ತು ಲಕ್ಷ್ಮೀ ಸಿದ್ದಯ್ಯ ಸೇರಿದಂತೆ ಹಲವು ಹಿರಿಯ ನಟರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಪೂರ್ಣ  ಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದು, ಮಧುಸೂದನ್ ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ದಿಗಂತ್ 'ಫಾರ್ಚ್ಯುನರ್' ಅಲ್ಲದೇ ಪುಷ್ಕರ್ ಬ್ಯಾನರ್ ನಡಿ ಸಣ್ಣೇಗೌಡ ಎಂಬ ಚಿತ್ರಕ್ಕೂ ಸಹಿ ಮಾಡಿದ್ದು, ಈ ಚಿತ್ರ ಕೂಡ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT