ಸಿನಿಮಾ ಸುದ್ದಿ

ನಾಲ್ಕು ವರ್ಷದ ಬಳಿಕ ಮತ್ತೆ ಟಿವಿ ಶೋ ನಡೆಸಿಕೊಡಲಿರುವ ಪವರ್ ಸ್ಟಾರ್ ಪುನೀತ್

Raghavendra Adiga
ಬೆಂಗಳೂರು: ಕನ್ನಡ ಚಿತ್ರರಂಗದ  ಪವರ್‌ ಸ್ಟಾರ್ ಪುನೀತ್‌ ರಾಜ್‌ ಕುಮಾರ್ ಬರೋಬ್ಬರಿ ನಾಲ್ಕು ವರ್ಷದ ನಂತರ ಕಿರುತೆರೆಗೆ ಮರಳಲಿದ್ದಾರೆ. 
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮದ ಪ್ರೊಮೋ ಶೂಟ್‌ ನಡೆದಿದ್ದು ಹೊಸ ಕಾರ್ಯಕ್ರಾಮದ ಹೆಸರೇನು ಅದರ ವಿಶೇಷತೆ ಏನು ಎಂಬುದರ ಕುರಿತು ವಾಹಿನಿ ಯಾವ ಸುಳಿವೂ ನೀಡಿಲ್ಲ. ಈ ಹಿಂದೆ ಪುನೀತ್ ನಡೆಸಿ ಕೊಡುತ್ತಿದ್ದ 'ಕನ್ನಡದ ಕೋಟ್ಯಾದಿಪತಿ' ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು.
ಸದ್ಯ ಸೃಜನ್‌ ಲೋಕೇಶ್ ನಿರೂಪಣೆಯ 'ಮಜಾ ಟಾಕೀಸ್ ಈ ವಾರ ಮುಕ್ತಾಯವಾಗಿದೆ. ಇನ್ನು 'ಮಜಾ ಭಾರತ' ಕಾರ್ಯಕ್ರಮವೂ ಮುಕ್ತಾಯವಾಗಲಿದೆ.
ಇದೆಲ್ಲದರ ಬದಲಿಗಾಗಿ ಹೊಸ ಮಾದರಿಯ ಕಾರ್ಯಕ್ರಮ ಪ್ರಾರಂಭಿಸಿ ವೀಕ್ಷಕರನ್ನು ಹಿಡಿದಿಡಲು ವಾಹಿನಿ ಭರ್ಜರಿ ತಯಾರಿ ನಡೆಸಿದೆ ಎನ್ನಲಾಗಿದೆ.
SCROLL FOR NEXT