ಸಿನಿಮಾ ಸುದ್ದಿ

49 ವರ್ಷಗಳ ಹಳೇಯ ಕಪಾಲಿ ಚಿತ್ರಮಂದಿರ ಇನ್ನು ನೆನಪು ಮಾತ್ರ!

Vishwanath S
ಬೆಂಗಳೂರು: 49 ವರ್ಷಗಳ ಹಳೇಯ ಕಪಾಲಿ ಚಿತ್ರಮಂದರಿ ಶಾಶ್ವತವಾಗಿ ಸ್ಥಗಿತಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಲಿದೆ. 
ನಗರದ ಮೆಜೆಸ್ಟಿಕ್ ನಲ್ಲಿರುವ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರದಲ್ಲಿ ಗುರುವಾರ ತಡರಾತ್ರಿ ಕೊನೆಯ ಪ್ರದರ್ಶನ ನಡೆಲಿದ್ದು ಶುಕ್ರವಾರದಿಂದ ಚಿತ್ರಮಂದಿರದಲ್ಲಿ ಯಾವುದೇ ಚಿತ್ರ ಪ್ರದರ್ಶನ ಇಲ್ಲ. ಇನ್ನು ಚಿತ್ರಮಂದಿರದ ಸ್ಥಳದಲ್ಲಿ ಬೃಹತ್ ಮಾಲ್ ತಲೆ ಎತ್ತಲಿದೆ. 
1968ರಲ್ಲಿ ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು ಕಪಾಲಿ ಚಿತ್ರಮಂದಿರವನ್ನು ಉದ್ಘಾಟಿಸಿದ್ದರು. ಕಪಾಲಿ ಚಿತ್ರಮಂದಿರ ಜಗತ್ತಿನ 3ನೇ ಅತಿ ದೊಡ್ಡ ಏಷ್ಯಾದಲ್ಲೇ ಮೊದಲ ಏಕ ಸ್ಕ್ರೀನ್ ಬಹುದೊಡ್ಡ ಚಿತ್ರ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಥಿಯೇಟರ್ ನಲ್ಲಿ ಸರಿಸುಮಾರು 1,465 ಆಸನಗಳನ್ನು ಹೊಂದಿದೆ. 
ವರನಟ ಡಾ. ರಾಜಕುಮಾರ್ ಅಭಿನಯದ ಮಣ್ಣಿನ ಮಗ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಚಿತ್ರ ಬರೋಬ್ಬರಿ ನೂರು ದಿನ ಪೂರೈಸಿತ್ತು. ಕನ್ನಡ ಚಿತ್ರವೊಂದು ನೂರು ದಿನ ಪೂರೈಸಿದ ಮೊದಲ ಚಿತ್ರ ಇದಾಗಿತ್ತು. ಇನ್ನು ಕಪಾಲಿ ಚಿತ್ರಮಂದಿರದಲ್ಲಿ ಹೆಚ್ಚಾಗಿ ರಾಜಕುಮಾರ್ ಅವರ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.
ಇಂದು ಕಪಾಲಿ ಚಿತ್ರಮಂದಿರದಲ್ಲಿ ಹುಲಿರಾಯ ಚಿತ್ರ ಪ್ರದರ್ಶನವಾಗುತ್ತಿದ್ದು ಈ ಚಿತ್ರದ ಪ್ರದರ್ಶನ ಕೊನೆಯದಾಗಲಿದೆ. 
SCROLL FOR NEXT