ಸಿನಿಮಾ ಸುದ್ದಿ

ಮನರಂಜನಾ ತೆರಿಗೆ ಶೇ.10ರಿಂದ ಶೇ.8ಕ್ಕೆ ಇಳಿಸಿದ ತಮಿಳುನಾಡು ಸರ್ಕಾರ

Lingaraj Badiger
ಚೆನ್ನೈ: ತಮಿಳು ಚಿತ್ರ ನಿರ್ಮಾಪಕರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಮಾತುಕತೆ ಶುಕ್ರವಾರ ಯಶಸ್ವಿಯಾಗಿದ್ದು, ಮನರಂಜನಾ ತೆರಿಗೆಯನ್ನು ಶೇ.10ರಿಂದ 8ಕ್ಕೆ ಇಳಿಸಲು ತಮಿಳುನಾಡು ಸರ್ಕಾರ ಒಪ್ಪಿಕೊಂಡಿದೆ.
ಮಾಧ್ಯಮಗಳ ವರದಿಯ ಪ್ರಕಾರ, ಸ್ಥಳೀಯ ಸಂಸ್ಥೆಯ ಮನರಂಜನಾ ತೆರಿಗೆ(ಎಲ್ ಬಿಇಟಿ)ಯನ್ನು ಶೇ.10ರಿಂದ ಶೇ.8ಕ್ಕೆ ಇಳಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳ ಮಾಲೀಕರು ತಮ್ಮ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಿಂಪಡೆದಿದ್ದಾರೆ.
ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸೆಪ್ಟೆಂಬರ್ 27ರಿಂದ ಜಾರಿಗೆ ಬರುವಂತೆ ತಮಿಳು ಚಿತ್ರಗಳ ಟಿಕೆಟ್ ಮೇಲೆ ಮನರಂಜನಾ ತೆರಿಗೆ ಶೇ.8 ಹಾಗೂ ಶೇ.28ರಷ್ಟು ಜಿಎಸ್ ಟಿ ನಿಗದಿ ಮಾಡಲಾಗಿದೆ. ಆದರೆ ತಮಿಳೇತರ ಚಿತ್ರಗಳ ಮೇಲಿನ ಶೇ.20ರಷ್ಟು ಮನರಂಜನಾ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಹಾಗೂ ನಿರ್ಮಾಪಕ ವಿಶಾಲ್ ಅವರು, ಎಲ್ಲಾ ಮಾದರಿಯ ಚಿತ್ರಮಂದಿರಗಳಿಗೂ ಶೇ.8ರಷ್ಟು ಮನರಂಜನಾ ತೆರಿಗೆ ನಿಗದಿ ಮಾಡಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ
ಸಿನಿಮಾ ಟಿಕೆಟ್‌ಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಎರಡು ರೀತಿ ಇರುತ್ತೆ. 100 ರು. ಒಳಗಿನ ಟಿಕೆಟ್ ಮೇಲೆ ಶೇ. 18ರಷ್ಟು, 100 ರು. ಮೇಲಿನ ಟಿಕೆಟ್‌ಗೆ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. 
SCROLL FOR NEXT