ಮನೋರಂಜನ್ 
ಸಿನಿಮಾ ಸುದ್ದಿ

ಬೃಹಸ್ಪತಿಯಾಗಿ ಬದಲಾದ ಸನ್ ಆಫ್ ರವಿಚಂದ್ರನ್: ರಿಡಬ್ಬಿಂಗ್ ನಲ್ಲಿ ಮನೋರಂಜನ್

ಮನೋರಂಜನ್ ಅಭಿನಯದ ಎರಡನೇ ಸಿನಿಮಾ ವಿಐಪಿ ಸಿನಿಮಾ ಟೈಟಲ್ ಬದಲಾಯಿಸಿ ಸನ್ ಆಫ್ ರವಿಚಂದ್ರನ್ ಎಂದು ಹೆಸರಿಸಲಾಗಿತ್ತು, ಈಗ ಅಂತಿಮವಾಗಿ ಬೃಹಸ್ಪತಿ ...

ಬೆಂಗಳೂರು: ಕೆಲ ನಿರ್ದೇಶಕರು ಮತ್ತು ನಟರು ಸಿನಿಮಾ ಉತ್ತಮವಾಗಿ ಮೂಡಿಬರಲೆಂದು ಚಿತ್ರದ ಕೆಲವೊಂದು ಭಾಗಗಳನ್ನು  ರಿಶೂಟಿಂಗ್ ಮಾಡುವುದನ್ನು ನಾವು ಕೇಳಿದ್ದೇವೆ, ಆದರೆ ನಾಯಕ ನಟನೊಬ್ಬನ ಒತ್ತಾಯದ ಮೇರೆಗೆ ರಿ ಡಬ್ಬಿಂಗ್ ಮಾಡಲಾಗಿದೆ.
ಮನೋರಂಜನ್ ಅಭಿನಯದ ಎರಡನೇ ಸಿನಿಮಾ ವಿಐಪಿ ಸಿನಿಮಾ ಟೈಟಲ್ ಬದಲಾಯಿಸಿ ಸನ್ ಆಫ್ ರವಿಚಂದ್ರನ್ ಎಂದು ಹೆಸರಿಸಲಾಗಿತ್ತು, ಈಗ ಅಂತಿಮವಾಗಿ ಬೃಹಸ್ಪತಿ ಎಂದು ಟೈಟಲ್ ಫೈನಲ್ ಮಾಡಲಾಗಿದೆ. 
ಮನೋರಂಜನ್ ಜೊತೆ ಇಡಿ ಸಿನಿಮಾ ತಂಡವೇ ರಿ ಡಬ್ಬಿಂಗ್ ನಲ್ಲಿ ಭಾಗಿಯಾಗಿದೆ. ನಾನು ಮತ್ತು ನನ್ನ ಸಹೋದರ ವಿಕ್ರಮ್ ಸಿನಿಮಾದ ಕೆಲ ಭಾಗಗಳನ್ನು ನೋಡಿದಾಗ ಅದರಲ್ಲಿ ನಾನು ಪೂರ್ಣವಾಗಿ ಧನುಶ್ ಸ್ಟೈಲ್ ಅನ್ನು ಪುನಾರಾವರ್ತಿಸಿರುವಂತೆ ತಿಳಿಯಿತು. ನಿರ್ದೇಶಕ ನಂದ ಕಿಶೋರ್ ಅದನ್ನ ಸರಿಯಾಗಿ ತಿಳಿ ಹೇಳಿದರು. ಈ ಸ್ಟೈಲ್ ಎನಿದ್ದರೂ ತಮಿಳು ನಟನಿಗೆ ಸರಿ ಹೊಂದುತ್ತದೆ ಎಂದು ಹೇಳಿದರು. ಹೀಗಾಗಿ ನಾನು ನನ್ನದೇ ಸ್ಟೈಲ್ ನಲ್ಲಿ ಡಬ್ಬಿಂಗ್ ಮಾಡಿದ್ದೇನೆ ಇದು ಎಲ್ಲಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ ಎಂದು ಮನೋರಂಜನ್ ಹೇಳಿದ್ದಾರೆ.
ಸಾಹೇಬ ನೋಡಿದ ಪ್ರೇಕ್ಷಕರಿಗೆ ಇದರಲ್ಲಿ ನಾನು ಮತ್ತಷ್ಟು ಸುಧಾರಿಸಿದ್ದೇನೆ ಎಂಬುದು ತಿಳಿಯಬೇಕು ಎಂದು ನನ್ನ ಮನಸ್ಸಿನಲ್ಲಿತ್ತು. ಇದೆಲ್ಲಾವನ್ನು ಗಮನದಲ್ಲಿಟ್ಟುಕೊಂಡು ನಾನು ಸಿನಿಮಾದ ಕೆಲವೊಂದ ಭಾಗಗಳನ್ನು ರಿ ಡಬ್ಬಿಂಗ್ ಮಾಡಲು ನಿರ್ಧರಿಸಿ ವಾಪಸ್ ಸ್ಟುಡಿಯೋಗೆ ತೆರಳಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಸಿನಿಮಾ ತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಲಿದೆ. ಅದಾದ ನಂತರ ಆಡಿಯೋ ಬಿಡುಗಡೆ ಮಾಡಲಿದೆ, ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಥಿಯೇಟರ್ ಗೆ ಬೃಹಸ್ಪತಿ ಬರಲಿದ್ದಾನೆ. 
ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ಮನುಗೆ ನಾಯಕಿಯಾಗಿ ಬಾಲಿವುಡ್ ನಟಿ ಮಿಷ್ಟಿ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

SCROLL FOR NEXT