ಗೌರಿ ಲಂಕೇಶ್ 
ಸಿನಿಮಾ ಸುದ್ದಿ

ತೆರೆಯ ಮೇಲೆ ಸಿನಿಮಾವಾಗಿ ಮೂಡಿ ಬರಲಿದೆ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಮರ್ಡರ್!

ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಜೀವನ ಚರಿತ್ರೆ ಆಧರಿತ ಚಿತ್ರ ತಯಾರಿಸುತ್ತಿದ್ದು, ಇದೇ ವೇಳೆ ಗೌರಿ ಲಂಕೇಶ್ ಕೊಲೆ ಕುರಿತ ಸಿನಿಮಾ ಮಾಡಲು...

ಬೆಂಗಳೂರು: ನಿರ್ದೇಶಕ ಎಎಂಆರ್ ರಮೇಶ್ ಗೌರಿ ಲಂಕೇಶ್ ಮರ್ಡರ್ ಕೇಸ್ ಕಥೆಯನ್ನಾಧರಿಸಿ ಕ್ರೈಂ ಆಧಾರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಜೀವನ ಚರಿತ್ರೆ ಆಧರಿತ ಚಿತ್ರ ತಯಾರಿಸುತ್ತಿದ್ದು, ಇದೇ ವೇಳೆ ಗೌರಿ ಲಂಕೇಶ್ ಕುರಿತ ಸಿನಿಮಾ ಮಾಡಲು ರಿಸೇರ್ಚ್ ಆರಂಭಿಸಿದ್ದಾರೆ. ನಿರ್ದೇಶಕ ಎಎಂಆರ್ ರಮೇಶ್ ಅವರಿಗೆ ಗೌರಿ ಲಂಕೇಶ್ ಆತ್ಮೀಯರಾಗಿದ್ದರು. 
ನಾನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಜೊತೆ ಮೊನಾಲಿಸಾ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆ ವೇಳೆ ನಾನು ಪ್ರತಿದಿನ ಗೌರಿ ಅವರನ್ನು ಭೇಟಿ ಮಾಡುತ್ತಿದ್ದೆ, ಇಂದ್ರಜಿತ್ ಅವರ ಕಚೇರಿ ಪಕ್ಕದಲ್ಲೇ ಗೌರಿ ಅವರ ಕಚೇರಿಯೂ ಇತ್ತು, ನನ್ನ ಕೆಲಸದ ಬಗ್ಗೆ ಆಕೆ ಯಾವಾಗಲೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು, ಆದರೆ  ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ನನಗೆ ಆಘಾತ ತಂದಿದೆ. ಆಕೆ ಕೊಲೆಯಾಗಿದ್ದಾರೆ ಎಂಬುದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಮೇಶ್ ಪ್ರತಿಕ್ರಿಯಿಸಿದ್ದಾರೆ.
ಗೌರಿ ಹತ್ಯೆಯ ಪ್ರಕರಣದ ಜೊತೆಗೆ ರಮೇಶ್, ಕಲ್ಬುರ್ಗಿ, ಪನ್ಸಾರೆ ಕೊಲೆ ಪ್ರಕರಣಗಳ ಮೇಲೂ ಬೆಳಕು ಚೆಲ್ಲಲಿದ್ದಾರೆ. ಆದರೆ ನನ್ನ ಫೋಕಸ್ ಗೌರಿಯನ್ನು ಯಾರು ಕೊಂದರು ಎಂಬುದರ ಬಗ್ಗೆಯಾಗಿದೆ ಎಂದು ಹೇಳಿದ್ದಾರೆ.
ಕೂಡಲೇ ನಾನು ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ, ತನಿಖೆ ಮುಗಿಯುವವರೆಗೂ ನಾನು ಕಾಯುತ್ತೇನೆ, ಕಥೆಯ ಬಗ್ಗೆ ಮಾತ್ರ  ನಾನು ಸಿನಿಮಾ ಮಾಡುತ್ತಿದ್ದೇನೆ, ಆದರೆ ಅದಕ್ಕಿಂತ ಹೆಚ್ಚಾಗಿ ಗೌರಿ ನನ್ನ ಸ್ನೇಹಿತೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel