ರಿಷಬ್ ಶೆಟ್ಟಿ ಅವರ ಮುಂಬರುವ ಚಿತ್ರ "ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡ್ ಕೊಡುಗೆ ರಾಮಣ್ಣ ರೈ" 
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ಚಿತ್ರದಲ್ಲಿ 'ವಿಶಿಷ್ಟ ಯುವಕ' ಆಗಲಿರುವ ಅನಂತ್ ನಾಗ್

ನಿರ್ದೇಶಕ ರಿಷಬ್ ಶೆಟ್ಟಿ ಮಕ್ಕಳ ಚಿತ್ರ ಮಾಡುವುದಾಗಿ ಘೊಷಿಸಿದ್ದಾರೆ. "ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳುವುದು........

ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ಮಕ್ಕಳ ಚಿತ್ರ ಮಾಡುವುದಾಗಿ ಘೊಷಿಸಿದ್ದಾರೆ. "ಚಿತ್ರದ ಶೂಟಿಂಗ್ ಪ್ರಾರಂಭಗೊಳ್ಳುವುದು ನಿರೀಕ್ಷಿಸಿದ್ದ ಸಮಯಕ್ಕಿಂತ ತುಸು ತಡವಾಗಿದೆ. ಏಕೆಂದರೆ ನಟ ಅನಂತ್ ನಾಗ್ ಗೆ ಹೊಂದುವ ಪಾತ್ರವೊಂದು ಆ ಚಿತ್ರದಲ್ಲಿದ್ದು ನಾನು ಅನಂತ್ ನಾಗ್ ಗಾಗಿ ಕಾಯುತ್ತಿದ್ದೆ. ಕಡೆಗೂ ಇದರಲ್ಲಿ ನಾವು ಯಶಸ್ವಿಯಾದೆವು" ಎಂದು ರಿಷಬ್ ಶೆಟ್ಟಿ ಹೇಳಿದರು.
"ಅನಂತ್ ನಾಗ್ ಈ ಚಿತ್ರದಲ್ಲಿ ತನ್ನ ವಯಸ್ಸಿನ ತಕ್ಕ ಪಾತ್ರವನ್ನು ನಿರ್ವಹಿಸುತ್ತಿದ್ದಾನೆ, ಆಪಾತ್ರವು ಒಬ್ಬ ಯುವಕನಂತೆ ವರ್ತಿಸುತ್ತದೆ. ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಪಾತ್ರಗಳನ್ನು ನಿರ್ವಹಿಸಿದ ಹಿರಿಯ ನಟ ಮತ್ತೊಮ್ಮೆ ಈ ಚಿತ್ರದಲ್ಲಿ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಪರೀಕ್ಷಿಸಲು ಹೊರಟಿದ್ದಾರೆ" ಎಂದು ರಿಷಬ್ ಹೇಳುತ್ತಾರೆ. "ಸ್ಕ್ರಿಪ್ಟ್ ಓದಲು ಐದು ದಿನ ತೆಗೆದುಕೊಂಡ ಅನಂತ್, ಕಥೆ ಮತ್ತು ಅವರ ಪಾತ್ರದ ಬಗ್ಗೆ ಉತ್ಸುಕರಾಗಿದ್ದರು. ಅದು ನನ್ನ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸಿತು "ಎಂದು ಅವರು ಹೇಳಿದರು.
ಚಿತ್ರದ ಶಿರ್ಷಿಕೆ ಸಹ ಗಮನ ಸೆಳೆಯುವಂತಿದ್ದು "ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡ್ ಕೊಡುಗೆ ರಾಮಣ್ಣ  ರೈ" ಎನ್ನುವುದನ್ನು ಶಾಲಾ ಬೋರ್ಡ್ ಮಾದರಿಯಲ್ಲಿಯೇ ತೋರಿಸಲಾಗಿದೆ.
"ಮಕ್ಕಳ ಚಲನಚಿತ್ರವು ಸಂಪೂರ್ಣ ಹಾಸ್ಯ ಭರಿತ ಮನರಂಜನೆಯಿಂದ ಕೂಡಿರಲಿದೆ" ಎಂದ ರಿಷಬ್ "ಇದು ಕಿರಿಕ್ ಪಾರ್ಟಿಯ ಕಿರಿಯ ಆವೃತ್ತಿ ಆಗಲಿದೆ,ನಾವು ಕಾಸರಗೋಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ಸಾಮಾಜಿಕ ಮತ್ತು ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದೇವೆ" ಎಂದು ಮಾಹಿತಿ ನೀಡಿದರು.
ತಂಡವು ಅಕ್ಟೋಬರ್ 5 ರಿಂದ ಚಿತ್ರೀಕರಣಕ್ಕೆ ತೊದಗಲಿದೆ, ಅನಂತ್ ನಾಗ್ ಅವರ ಪಾತ್ರದ ಭಾಗಗಳನ್ನು ಮೊದಲು ಚಿತ್ರೀಕರಿಸಲಾಗುವುದು.
"ಕಾಸರಗೋಡು ಮಂಗಳೂರು ಮತ್ತು ಮೈಸೂರಿನ 800 ರಿಂದ 900 ನಟರ ಆಡಿಷನ್ ನಡೆಸಿದ ರಿಷಬ್ . "ಅವರು ಎಲ್ಲಾ ವಯಸ್ಸಿನ ಜನರಊ ಆಡಿಷನ್ ನಲ್ಲಿ ಭಗವಹಿಸಿದ್ದಾರೆ. ವರ್ಕ್ ಶಾಪ್ ಗಳ ಮೂಲಕ ಈ ಆಡಿಷನ್ ನಡೆಸಲಾಗಿತ್ತು.ಅದರಲ್ಲಿ ಅತ್ಯುತ್ತಮ 54 ನಟರನ್ನು ಆಯ್ಕೆ ಮಾಡಲಾಗಿದೆ" ಎಂದು ರಿಷಬ್ ಮಾಹಿತಿ ನೀಡಿದರು.
 "ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡ್ ಕೊಡುಗೆ ರಾಮಣ್ಣ  ರೈ", ರಿಷಬ್ ಅವರ ಸ್ವಂತ ನಿರ್ಮಾಣದ ಮೊದಲ ಚಿತ್ರವಾಗಿದೆ, ವಾಸುಕಿ ವೈಭವ್ ಸಂಗೀತದಲ್ಲಿ ಒಂಭತ್ತು ಗೀತೆಗಳಿವೆ. ವೆಂಕಟೇಶ್ ಅಂಗುರಾಜ್ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ "ನಾವು ವಿವಿಧ ಫೆಸ್ಟಿವಲ್ ಸರ್ಕ್ಯೂಟ್ ಗಳಲ್ಲಿ ಇದನ್ನು ಮೊದಲಿಗೆ ಪ್ರದರ್ಶಿಸುತ್ತೇವೆ. ಆದರೂ ನಾವು ಇದನ್ನು ಬಿಗ್ಗದೊಡ್ದ ಮಟ್ಟದಲ್ಲಿ ಬಿಡುಗಡೆ ಮಾದಲಿದ್ದೇವೆ" ಎಂದು ರಿಷಬ್ ಆತ್ಮ ವಿಶ್ವಾಸದಿಂದ ನುಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ