ರಾಜ್ ಬಿ ಶೆಟ್ಟಿ 
ಸಿನಿಮಾ ಸುದ್ದಿ

ಮೊಟ್ಟೆ ಕಥೆ ಹೇಳಿದ್ದ ರಾಜ್ ಬಿ ಶೆಟ್ಟಿ ಈಗ ಕ್ಯಾಬ್ ಡ್ರೈವರ್

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಪ್ರಖ್ಯಾತರಾಗಿರುವ ರಾಜ್ ಬಿ ಶೆಟ್ಟಿ ಮಾನವೀಯತೆಯನ್ನು ತೆರೆದಿಟ್ಟು ಪ್ರೇಕ್ಷಕರ ಮನಸ್ಸನ್ನು ಗೆದ್ದು ನಿರ್ದೇಶನದಲ್ಲಿ ಸೈ...

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಪ್ರಖ್ಯಾತರಾಗಿರುವ ರಾಜ್ ಬಿ ಶೆಟ್ಟಿ ಮಾನವೀಯತೆಯನ್ನು ತೆರೆದಿಟ್ಟು ಪ್ರೇಕ್ಷಕರ ಮನಸ್ಸನ್ನು ಗೆದ್ದು ನಿರ್ದೇಶನದಲ್ಲಿ ಸೈ ಎನಿಸಿಕೊಂಡಿದ್ದರು. ಆದರೆ ಇದೀಗ ತಮ್ಮ ನಟನೆಗೆ ಹೆಚ್ಚಿನ ಒತ್ತು ನೀಡಿದ್ದು ಹೇಮಂತ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ರೆಡಿಯಾಗಿದ್ದಾರೆ. 
ಇನ್ನು ಹೆಸರಿಡದ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರ ಇಂದು ಸೆಟ್ಟೇರುತ್ತಿದೆ. ನಾನೊಬ್ಬ ಸ್ಟಾರ್ ನಟನಾಗಲು ಇಲ್ಲಿಗೆ ಬಂದಿಲ್ಲ. ಹಾಗಾಗಿ ನನ್ನನ್ನು ಆಕರ್ಷಿಸುವ ಪಾತ್ರಗಳನ್ನು ತೆಗೆದುಕೊಳ್ಳಲು ನಾನು ಸ್ವಾಂತ್ರ್ಯವಾಗಿದ್ದೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದರು. 
ಒಂದು ಮೊಟ್ಟೆಯ ಕಥೆಯಲ್ಲಿನ ಪಾತ್ರಧಾರಿ ಜನಾರ್ಧನನ ಅಭಿನಯ ಹೇಮಂತ್ ಅವರಿಗೆ ಇಷ್ಟವಾಗಿದೆ. ಹೀಗಾಗಿ ನನ್ನ ಅಭಿನಯವನ್ನು ಗುರುತಿಸಿ ಈ ಚಿತ್ರಕ್ಕೆ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಚಿತ್ರ ಎಲ್ಲಾ ಕನ್ನಡ ಚಿತ್ರಗಳಂತಲ್ಲ. ಈ ಪಾತ್ರವು ಜೀವನ ಮತ್ತು ವ್ಯಾಪ್ತಿಯನ್ನು ಪರಿಶೋಧಿಸುತ್ತದೆ ನಾನು ಭಾವಿಸುತ್ತೇನೆ. ನನ್ನ ನಿರ್ಧಾರ ಸರಿ ಅಥವಾ ತಪ್ಪೇ ಆಗಿರಬಹುದು. ಆದರೆ ಒಂದು ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ ಎಂದು ನಾನು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದರು. 
ಎಲ್ಲರೂ ಒಂದು ಮೊಟ್ಟೆಯ ಕಥೆ ಚಿತ್ರದ ಜನಾರ್ಧನನ ಪಾತ್ರದಂತ ಕಥೆಗಳನ್ನೇ ಮಾಡಿವಂತೆ ಕೇಳಿದರೂ ಇಂತಹ ಆಫರ್ ಗಳನ್ನು ನಾನು ತಿರಸ್ಕರಿಸಿದೆ. ಮತ್ತೆ ನಾನು ಮಂಗಳೂರಿಗನ ಪಾತ್ರ ಮಾಡುವುದನ್ನು ಇಷ್ಟಪಡುವುದಿಲ್ಲ. ನಿರ್ದೇಶಕರು ಹೇಳಿದಂತೆ ಅವರ ಕಲ್ಪನೆಗೆ ತಕ್ಕಂತೆ ಅಭಿನಯಿಸುವುದು ಸೂಕ್ತ ಎಂದು ಅನಿಸಿತು ಎಂದು ಶೆಟ್ಟಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!