ನಿರ್ದೇಶಕ ರವಿ ವರ್ಮ ಮತ್ತು ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

'ರುಸ್ತುಂ' ನಲ್ಲಿ ವಿಶಿಷ್ಟ ಗೆಟಪ್ ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್

ಶಿವರಾಜ್ ಕುಮಾರ್ ಅಭಿನಯದ ಮೊದಲ ನಿರ್ದೇಶನದ ಚಿತ್ರದಲ್ಲಿ ಸ್ಟಂಟ್ ಡೈರೆಕ್ಟರ್ ರವಿ ವರ್ಮ ಸಾಕಷ್ಟು ನಿರೀಕ್ಷೆ ...

ಶಿವರಾಜ್ ಕುಮಾರ್ ಅಭಿನಯದ ಮೊದಲ ನಿರ್ದೇಶನದ ಚಿತ್ರದಲ್ಲಿ ಸ್ಟಂಟ್ ಡೈರೆಕ್ಟರ್ ರವಿ ವರ್ಮ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಹುಟ್ಟುಹಾಕಿದ್ದಾರೆ. ಹೊಸ ಬ್ರಾಂಡ್ ಹೈ ಎಂಡ್ ಕ್ಯಾಮರಾದಲ್ಲಿ ಅತ್ಯುನ್ನತ ಮಟ್ಟದಲ್ಲಿ ರವಿ ವರ್ಮ ಅತ್ಯುನ್ನತ ಮಟ್ಟದಲ್ಲಿ ಫೊಟೊಶೂಟ್ ಮಾಡಿಸಿದ್ದಾರೆ. ಜಯಣ್ಣ ಕಂಬೈನ್ಸ್ ನಡಿ ತಯಾರಾಗುತ್ತಿರುವ ಚಿತ್ರದ ಮುಹೂರ್ತ ಏಪ್ರಿಲ್ 24ರಂದು ನಡೆಯಲಿದೆ, ಅಂದು ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ.

ಮೋಶನ್ ಪೋಸ್ಟರ್ ಮತ್ತು ಫೊಟೊಶೂಟ್ ನೊಂದಿಗೆ ಚಿತ್ರತಂಡ ತಯಾರಾಗುತ್ತಿದೆ. ಮಿನರ್ವ ಮಿಲ್ ನಲ್ಲಿ ದೊಡ್ಡ ಸೆಟ್ ನ್ನು ತಯಾರಿಸಲಾಗಿದ್ದು ಅದ್ವಿತೀಯ ಚಿತ್ರವಾಗಿ ತಯಾರಿಸುವ ಯೋಜನೆಯಲ್ಲಿ ನಿರ್ದೇಶಕರಿದ್ದಾರೆ. ಕೇವಲ ಫೊಟೊಶೂಟ್ ವೊಂದಕ್ಕೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಕ್ಕಾಗಿ ಫೇಸ್ ಒನ್ ಮೆಗಾ ಪಿಕ್ಸೆಲ್ ಕ್ಯಾಮರಾವನ್ನು ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಬಳಸಲಾಗಿದೆ.

ಚಿತ್ರದಲ್ಲಿ ಶಿವರಾಜ್ ಕುಮಾರ್ ರುಸ್ತುಂ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು ಅವರನ್ನ ವಿಶಿಷ್ಟವಾಗಿ ತೋರಿಸಲು ರವಿ ವರ್ಮ ಮುಂದಾಗಿದ್ದಾರೆ. ನಟಿ ಮಯೂರಿ ಕೂಡ ಅಭಿನಯಿಸುತ್ತಿದ್ದು ಅವರು ಸಹ ಫೊಟೊಶೂಟ್ ನಲ್ಲಿ ಭಾಗವಹಿಸಿದ್ದಾರೆ. ಅವರು ಶಿವರಾಜ್ ಕುಮಾರ್ ತಂಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್ ಚಿತ್ರದ ನಾಯಕಿ. ಬಾಲಿವುಡ್ ನಟನನ್ನು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲು ಕರೆದುಕೊಂಡು ಬರಲು ಚಿತ್ರತಂಡ ಯೋಜಿಸುತ್ತಿದೆ.

ಅನೂಪ್ ಸೀಲಿನ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

SCROLL FOR NEXT