ಬಾಹುಬಲಿ ನಿರ್ದೇಶಕ ರಾಜಮೌಳಿ 
ಸಿನಿಮಾ ಸುದ್ದಿ

ರಂಗಸ್ಥಲಂ ಅತ್ಯುತ್ತಮ ಚಿತ್ರ; ಬಾಹುಬಲಿ ನಿರ್ದೇಶಕ ರಾಜಮೌಳಿ

ತೆಲುಗು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸುತ್ತಿರುವ ಚಿತ್ರ ರಂಗಸ್ಥಲಂ ಚಿತ್ರವನ್ನು ಬಾಹುಬಲಿ ನಿರ್ದೇಶಕ ರಾಜಮೌಳಿಯವರು ಹಾಡಿಹೊಗಳಿದ್ದಾರೆ...

ಚೆನ್ನೈ: ತೆಲುಗು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸುತ್ತಿರುವ ಚಿತ್ರ ರಂಗಸ್ಥಲಂ ಚಿತ್ರವನ್ನು ಬಾಹುಬಲಿ ನಿರ್ದೇಶಕ ರಾಜಮೌಳಿಯವರು ಹಾಡಿಹೊಗಳಿದ್ದಾರೆ. 
ಚಿತ್ರ ವೀಕ್ಷಣೆ ಬಳಿಕ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ರಂಗಸ್ಥಲಂ ಅತ್ಯುತ್ತಮ ಚಿತ್ರ ಎಂದು ಹೇಳಿದ್ದಾರೆ. 
ರಂಗಸ್ಥಲಂ ಚಿತ್ರದ ಬಗ್ಗೆ ಹೇಳಲು ಸಾಕಷ್ಟು ವಿಚಾರಗಳಿವೆ. ಆದರೆ, ಚಿಟ್ಟಿಬಾಬುಗಾಗಿ ಸುಕುಮಾರ್ ಅವರು ಬರೆದಿರುವ ಪಾತ್ರ ಮತ್ತು ಆ ಪಾತ್ರದಲ್ಲಿ ನಟ ರಾಮ್ ಚರಣ್ ತೇಜ ಅವರ ನಟನೆ ಎಲ್ಲದರ ಮೇಲೂ ಗ್ರಹಣ ಮೂಡಿದಂತೆ ಮಾಡುತ್ತದೆ. ಪ್ರತೀಯೊಂದು ಸೂಕ್ಷ್ಮವಾದ ಪಾತ್ರಗಳು ನೋಡಬೇಕೆಂದೆನಿಸುತ್ತದೆ. ಚಿತ್ರ ಅತ್ಯುತ್ತಮವಾಗಿದೆ ಎಂದು ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಪಾತ್ರಗಳಲ್ಲಿ ರಾಮ್ ಚರಣ್ ತೇಜಗೆ ಸಮವಾಗಿ ನಿಲ್ಲುವ ಏಕೈಕ ವ್ಯಕ್ತಿಯೆಂದರೆ ಜಗಪತಿ ಬಾಬು. ನಿಧಾನಗತಿಯಲ್ಲಿ ಸಂಭಾಷಣೆಗಳನ್ನು ಹೇಳುವುದು ಹಾಗೂ ಅವರ ಅಭಿನಯವಂತೂ ಅದ್ಭುತ. ಮೈತ್ರಿ, ಸುಕುಮಾರ್ ಹಾಗೂ ರಂಗಸ್ಥಲಂ ಚಿತ್ರ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT