ಕಾರ್ತಿಕ್ ಸುಬ್ಬರಾಜ್ ಅವರ ಮಹಿಳಾವಾದಿ ಸಿನಿಮಾ ಇರೈವಿಯಲ್ಲಿ ಪಾತ್ರ ನಿರ್ವಹಿಸಿದ ಶಶಾಂಕ್ ಪುರುಷೋತ್ತಮ್ ನಿರ್ದೇಶಕರ ಮುಂಬರುವ ಮೂಕ ಚಿತ್ರ ಮರ್ಕ್ಯುರಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಉತ್ತಮ ಹೆಸರು ತಂದುಕೊಡಬಹುದು ಎಂಬ ವಿಶ್ವಾಸದಲ್ಲಿದ್ದಾರೆ.
ದಂತ ವೈದ್ಯರಾಗಿ ನಂತರ ರಂಗಭೂಮಿ ಕಲಾವಿದರಾಗಿರುವ ಶಶಾಂಕ್ ಪುರುಷೋತ್ತಮ ಮೂಕಚಿತ್ರದ ಅನುಭವ ತುಂಬಾ ವಿಭಿನ್ನವಾಗಿತ್ತು. ನನ್ನತನವನ್ನು ತೋರಿಸಿಕೊಳ್ಳಲು ನಾನು ಯಾವತ್ತೂ ನನ್ನ ಸ್ವರವನ್ನು ನಂಬಿಕೊಂಡೆ. ಇಷ್ಟು ವರ್ಷ ರಂಗಭೂಮಿಯಲ್ಲಿ ಮರ್ಕ್ಯುರಿಯಲ್ಲಿನ ಪಾತ್ರಗಳನ್ನು ಮಾಡಿರಲಿಲ್ಲ ಎಂದರು.
ಪ್ರಭುದೇವ ನಟಿಸಿರುವ ಮರ್ಕ್ಯುರಿ ಚಿತ್ರ ಐವರು ಸ್ನೇಹಿತರ ಕಥೆಯನ್ನೊಳಗೊಂಡಿದೆ. ಅವರಲ್ಲೊಬ್ಬ ಪಾತ್ರವನ್ನು ಶಶಾಂಕ್ ಮಾಡಿದ್ದಾರೆ. ಈ ಚಿತ್ರ ತಯಾರಿಸಲು ಹಲವು ಸಿದ್ದತೆಗಳನ್ನು ಮಾಡಿಕೊಳ್ಳಲಾಯಿತು. ಹಲವು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದೆ. ಈ ಚಿತ್ರದ ಮೂಲಕ ಬೇರೆ ಪ್ರದೇಶದ ಕಲಾವಿದರನ್ನು ಭೇಟಿ ಮಾಡಿದೆ ಎಂದರು ಶಶಾಂಕ್.