ಯಶ್ 
ಸಿನಿಮಾ ಸುದ್ದಿ

ಕೆಜಿಎಫ್ ಒಂದು ಹೆಗ್ಗುರುತು: ಯಶ್

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕಳೆದ ಒಂದು ವರ್ಷದಿಂದ ಕೆಜಿಎಫ್ ನ ಸುಡು ಬಿಸಿಲಿನಲ್ಲಿ ಶೂಟಿಂಗ್ ಭರದಿಂದ ಸಾಗಿತ್ತು...

ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಕಳೆದ ಒಂದು ವರ್ಷದಿಂದ ಕೆಜಿಎಫ್ ನ ಸುಡು ಬಿಸಿಲಿನಲ್ಲಿ ಶೂಟಿಂಗ್ ಭರದಿಂದ ಸಾಗಿತ್ತು. 
ತಮ್ಮ ಚಿತ್ರದ ಕುರಿತಂತೆ ಮಾತನಾಡಿರುವ ಯಶ್, ನಾವು ಅಂದುಕೊಂಡದೆ ಕೆಜಿಎಫ್ ನಲ್ಲಿ ಮೊದಲ ಭಾಗದ ಚಿತ್ರೀಕರಣ ನಡೆಸಿದ್ದೇವು. ಕೆಜಿಎಫ್ ನಲ್ಲಿ ನಿಜಕ್ಕೂ ಸುಡು ಬಿಸಿಲು. ಅದರಲ್ಲೂ 12 ರಿಂದ 3 ಗಂಟೆಯವರೆಗೆ ಕೆಜಿಎಫ್ ಕೆಂಡದಂತಾಗಿರುತ್ತದೆ. ಇನ್ನು ಅಲ್ಲಿ ಹುಡುಕಿದರೂ ಒಂದು ಮರ ಕೂಡ ಕಾಣುವುದಿಲ್ಲ. ತೇವಾಂಶದ ಗಾಳಿಯು ಎಲ್ಲಕ್ಕಿಂತ ಕೆಟ್ಟದಾಗಿತ್ತು. ಅಂತೂ ಒಂದು ವರ್ಷಗಳ ಕಾಲ ಕೆಜಿಎಫ್ ನಲ್ಲಿ ಚಿತ್ರೀಕರಣ ಮುಗಿಸಿದ್ದೇವೆ ಎಂದರು. 
ಇನ್ನು ತಮ್ಮ ಮದುವೆಯಾದ ಕೂಡಲೇ ಕೆಜಿಎಫ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು ಕೊಂಚ ಕಷ್ಟವಾಗಿತ್ತು. ಆದರೆ ಅದನ್ನೆಲ್ಲಾ ನಿಭಾಯಿಸುತ್ತೇನೆ ಎಂದು ಅಂದುಕೊಂಡಿದ್ದೆ. ಈ ಸಮಯದಲ್ಲಿ ಬಹಳಷ್ಟು ಸಂಗತಿಗಳು ಸಂಭವಿಸಿದವು ನಾನು ಪ್ರತಿ ಕ್ಷಣವನ್ನೂ ಅನುಭವಿಸಿದೆ ಎಂದರು. 
ಹೊಂಬಾಳೆ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಐದು ಭಾಷೆಗಳಲ್ಲಿ ಕೆಜಿಎಫ್ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಚಿತ್ರದಲ್ಲಿನ ತಮ್ಮ ಪಾತ್ರ ರಾಖಿ ಕುರಿತಂತೆ ಹೇಳಬೇಕಾದರೆ ಅವನೊಬ್ಬ ಧೈರ್ಯಶಾಲಿ ಮತ್ತು ಆತ್ಮವಿಶ್ವಾಸ ಉಳ್ಳವನು. ಆದರೆ ಪ್ರತಿಯೊಂದು ಘಟನೆಯನ್ನು ನಾವು ತೆರೆಯ ಮೇಲೆ ತೋರಿಸಲು ಆಗುವುದಿಲ್ಲ. ಆದರೆ ಆತನ ಸ್ವಭಾವವನ್ನು ಹಂಚಿಕೊಂಡಿದ್ದೇನೆ. ಇದು ನನಗೆ ಹೇಳಿ ಮಾಡಿಸಿದ ಪಾತ್ರ ಎಂದು ಯಶ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ