ಶರಣ್ 
ಸಿನಿಮಾ ಸುದ್ದಿ

ರವಿಶಂಕರ್ ಗೌಡ ಬದಲಿಗೆ ಈಗ ಶರಣ್ ಲೇಡೀಸ್ ಟೈಲರ್

ವಿಜಯ್ ಪ್ರಸಾದ್ ನಿರ್ದೇಶನದ ಲೇಡೀಸ್ ಟೈಲರ್ ಚಿತ್ರಕ್ಕೆ ವಿಘ್ನಗಳು ಎದುರಾಗಿದ್ದು ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರು ನಾಲ್ಕು ಬಾರಿ ನಾಯಕರು ಬದಲಾಗಿದ್ದರು...

ವಿಜಯ್ ಪ್ರಸಾದ್ ನಿರ್ದೇಶನದ ಲೇಡೀಸ್ ಟೈಲರ್ ಚಿತ್ರಕ್ಕೆ ವಿಘ್ನಗಳು ಎದುರಾಗಿದ್ದು ಚಿತ್ರ ಪ್ರಾರಂಭವಾಗುವುದಕ್ಕೆ ಮುನ್ನವೇ ಮೂರು ನಾಲ್ಕು ಬಾರಿ ನಾಯಕರು ಬದಲಾಗಿದ್ದರು. 
ಅಂತಿಮವಾಗಿ ರವಿಶಂಕರ್ ಗೌಡ ಮತ್ತು ಶ್ರುತಿ ಹರಿಹರನ್ ಅಭಿನಯದಲ್ಲಿ ಲೇಡೀಸ್ ಟೈಲರ್ ಚಿತ್ರವನ್ನು ಮತ್ತೆ ಶುರು ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಬಂದ ಸುದ್ದಿಯ ಪ್ರಕಾರ, ಚಿತ್ರದ ನಾಯಕ ಮತ್ತೆ ಬದಲಾಗಿದ್ದಾರೆ. ಈ ಬಾರಿ ರವಿಶಂಕರ್ ಗೌಡ ಬದಲು ಶರಣ್ ಈ ಚಿತ್ರದಲ್ಲಿ ಲೇಡೀಸ್ ಟೈಲರ್ ಆಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. 
ಹೌದು, ರವಿಶಂಕರ್ ಗೌಡ ಅವರನ್ನು ಚಿತ್ರತಂಡದಿಂದ ಕೈಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿದ ಉದಾಹರಣೆ ಸಿಗುವುದು ಕಷ್ಟ. ಕಳೆದ ವರ್ಷ, ಲೇಡೀಸ್ ಟೈಲರ್ ಎಂಬ ಚಿತ್ರವಾಗುತ್ತೆದ ಎಂಬ ಮೊದಲ ಪ್ರಕಟಣೆ ಹೊರಬಿದ್ದಾಗ, ಚಿತ್ರದ ನಾಯಕನಾಗಿದ್ದವರು ರವಿಶಂಕರ್ ಗೌಡ ಆದರೆ ಕೆಲವು ದಿನಗಳ ನಂತರ ರವಿಶಂಕರ್ ಬದಲು ಸತೀಶ್ ನೀನಾಸಂ ನಟಿಸುತ್ತಿದ್ದಾರೆ ಎಂದು ಹೇಳಲಾಯ್ತು. 
ರವಿಶಂಕರ್ ಗೌಡ ಕೆಲ ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಇದೀಗ ಮತ್ತೆ ನಾಯಕ ಬದಲಾಗಿದ್ದು ನಟ ಶರಣ್ ನಟಿಸುತ್ತಿದ್ದಾರೆ. ಇನ್ನು ಚಿತ್ರದ ನಿರ್ಮಾಪಕರು ಸಹ ಬದಲಾಗಿದ್ದು ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕೆಎ ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್