ನವದೆಹಲಿ: ಟ್ರೋಲ್ ಮಾಡಿದವರನ್ನು ಯಾವ ರೀತಿ ಹ್ಯಾಂಡಲ್ ಮಾಡಬೇಕು ಎಂಬುದು ನಟ ಅಭಿಷೇಕ್ ಬಚ್ಚನ್ ಗೆ ಕರಗತವಾಗಿದೆ. ಅವರ ಕುಟುಂಬದ ಯಾವುದೇ ಸದಸ್ಯರ ಬಗ್ಗೆ ಟ್ರೋಲ್ ಮಾಡಿದರೂ ಅಭಿಷೇಕ್ ಸುಮ್ಮನೆ ಕೂರುವುದಿಲ್ಲ, ಬದಲಿಗೆ ಪ್ರತಿಕ್ರಿಯೆ ನೀಡಿ ಬೆವರಿಳಿಸುತ್ತಾರೆ.
ನಿಮ್ಮ ಜೀವನದ ಬಗ್ಗೆ ಬೇಸರಿಸಿಕೊಳ್ಳಬೇಡಿ, ತಂದೆ-ತಾಯಿ ಜೊತೆ ಈಗಲೂ ವಾಸಿಸುತ್ತಾನೆ ನೋಡಿ ಎಂದು ಟ್ರೋಲ್ ಮಾಡಿದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಬೆವರಿಳಿಸಿದ್ದಾರೆ. ಅಭಿಷೇಕ್ ಅವರ ಪ್ರತಿಕ್ರಿಯೆ ನೋಡಿ ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
“ನಿಮ್ಮ ಜೀವನದ ಬಗ್ಗೆ ಬೇಸರ ಮಾಡಿಕೊಳ್ಳಬೇಡಿ. ಅಭಿಷೇಕ್ ಬಚ್ಚನ್ ಈಗಲೂ ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಾರೆ. ಎಲ್ಲರೂ ಹೀಗೆ ಕಲಿಯಿರಿ” ಎಂದು ವೈಬಿಎನ್ ಎಂಬ ಅಭಿಮಾನಿ ಟ್ವಿಟ್ಟರಿನಲ್ಲಿ ಟ್ರೋಲ್ ಮಾಡಿದ್ದನು.
ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್, “ನನ್ನ ತಂದೆ-ತಾಯಿ ಜೊತೆಯಿರುವುದು ನನಗೆ ಹೆಮ್ಮೆಯ ವಿಷಯ. ಅವರಿಗೂ ನನ್ನ ಜೊತೆ ಇರುವುದಕ್ಕೆ ಹೆಮ್ಮೆ ಪಡುತ್ತಾರೆ. ನೀವು ಇದೇ ರೀತಿಯಾಗಿ ಪೋಷಕರ ಜೊತೆ ಇರಿ. ನಿಮಗೂ ತೃಪ್ತಿ ಆಗುತ್ತದೆ” ಎಂದು ಜೂ. ಬಚ್ಚನ್ ಟ್ವೀಟ್ ಮಾಡಿದ್ದಾರೆ.
ನಂತರ ಮತ್ತೊಬ್ಬ ಅಭಿಮಾನಿ ನೀವು ಏಕೆ ಎಲ್ಲ ಟ್ರೋಲ್‍ಗಳಿಗೆ ಪ್ರತಿಕ್ರಿಯಿಸುತ್ತಿರಿ ಎಂದು ಕೇಳಿದ್ದಕ್ಕೆ, ಕೆಲವು ಬಾರಿ ಜನರಿಗೆ ಅವರ ನಿಜವಾದ ಜಾಗ ತೋರಿಸಬೇಕಾಗುತ್ತದೆ ಎಂದು ಅಭಿಷೇಕ್ ಬಚ್ಚನ್ ಉತ್ತರಿಸಿದ್ದಾರೆ.
ಟ್ರೋಲ್ ಮಾಡಿದವರಿಗೆ ಅಭಿಷೇಕ್ ಕೊಟ್ಟ ಪ್ರತಿಕ್ರಿಯೆಗೆ ಹಲವು ಮಂದಿ, “ನೀವು ಬೇರೆ ಮನೆ ಮಾಡದೇ ತಂದೆ-ತಾಯಿ ಜೊತೆ ವಾಸಿಸುತ್ತಿರುವುದರ ಬಗ್ಗೆ ನೀವು ಯಾರಿಗೂ ಏನೂ ಹೇಳಬೇಕಿಲ್ಲ. ವಯಸ್ಸಾದ ತಂದೆ-ತಾಯಿಯ ಜೊತೆ ಇದ್ದು, ಅವರನ್ನು ನೋಡಿಕೊಳ್ಳಬೇಕು” ಎಂದು ಟ್ವೀಟ್ ಮಾಡಿ ಅಭಿಷೇಕ್ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics