ಸುದೀಪ್ 
ಸಿನಿಮಾ ಸುದ್ದಿ

ನಾಯಕಿಯ ಆಯ್ಕೆಗೂ ಮುನ್ನವೇ ’ಕೋಟಿಗೊಬ್ಬ-3’ ಶೂಟಿಂಗ್ ಪ್ರಾರಂಭ

ಸುದೀಪ್ ನಾಯಕ ನಟನಾಗಿ ಅಭಿನಯಿಸಲಿರುವ ’ಕೋಟಿಗೊಬ್ಬ-3 ’ ಇದೇ ಡಿಸೆಂಬರ್ ಅಂತ್ಯದ ವೇಳೆಗೆ ತೆರೆಗೆ ಬರಲಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಘೋಷಿಸಿದ್ದಾರೆ.

ಬೆಂಗಳೂರು: ಸುದೀಪ್ ನಾಯಕ ನಟನಾಗಿ ಅಭಿನಯಿಸಲಿರುವ ’ಕೋಟಿಗೊಬ್ಬ-3 ’ ಇದೇ ಡಿಸೆಂಬರ್ ಅಂತ್ಯದ ವೇಳೆಗೆ ತೆರೆಗೆ ಬರಲಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಘೋಷಿಸಿದ್ದಾರೆ.
ಸುದೀಪ್ ಸ್ವತಃ ಬರೆದ ಕಥೆಯನ್ನು ನವ ನಿರ್ದೇಶಕ ಶಿವ ಕಾರ್ತಿಕ್ ತೆರೆ ಮೇಲೆ ತರುತ್ತಿದ್ದಾರೆ.,ಮಾ.2ರಂದು ಚಿತ್ರದ ಮಹೂರ್ತ ನಡೆದಿದ್ದು ಇದೇ ಬುಧವಾರದಿಂದ ಚಿತ್ರೀಕರಣ ಪ್ರಾರಂಭವಾಗಿದೆ. ವಿಶೇಷವೆಂದರೆ ಚಿತ್ರಕ್ಕೆ ನಾಯಕಿ ಆಯ್ಕೆ ಅಂತಿಮಗೊಳ್ಳುವುದಕ್ಕೆ ಮುನ್ನವೇ ಚಿತ್ರೀಕರಣ ಪ್ರಾರಂಭವಾಗಿದೆ.
ಸುದೀಪ್ ಅಥವಾ ಯಾವ ಮುಖ್ಯಪಾತ್ರಗಳಿಲ್ಲದ ದೃಶ್ಯಗಳನ್ನು ಸಧ್ಯ ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು ಈ ಯೋಜನೆಯಿಂದ ಸರಿಯಾದ ಸಮಯಕ್ಕೆ ಚಿತ್ರೀಕರಣ ಮುಗಿಸಲು ಚಿತ್ರತಂಡಕ್ಕೆ ಸಹಕಾರಿಯಾಗಲಿದೆ.
’ಕೋಟಿಗೊಬ್ಬ-3 ಗೆ ಅರ್ಜುನ್ ಜನ್ಯ ಸಂಗೀತ ನಿಡಿದ್ದು ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ.
ಸುದೀಪ್ ’ಕೋಟಿಗೊಬ್ಬ-3’ ಜತೆಗೆ ’ಪೈಲ್ವಾನ್’ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು ಎರಡು ಚಿತ್ರಗಳಲ್ಲಿ ಅಭಿನಯಿಸಲು ತಮ್ಮ ಡೇಟ್ಸ್ ಗಳನ್ನು ವಿಂಗಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಧ್ಯ ಸುದೀಪ್ ಕುಟುಂಬದವರೊಡನೆ ವಿಶ್ರಾಂತಿಯಲ್ಲಿದ್ದು ಮೇ 1 ಅಥವಾ 2 ರಂದು ಸೆಟ್ ಗೆ ಆಗಮಿಸಲಿದ್ದಾರೆ. ಇದರ ನಡುವೆ ಅವರು ’ಅಂಬಿ ನಿಂಗ್ ವಯಸ್ಸಾಯ್ತೋ’ ಹಾಗೂ ’ದಿ ವಿಲನ್’ ಚಿತ್ರದಲ್ಲಿನ ತನ್ನ ಭಾಗದ ಚಿತ್ರೀಕರಣ ಪೂರೈಸಬೇಕಿದೆ. ಆ ವಳಿಕವೇ ಅವರು ಈ ಎರಡು ಚಿತ್ರಗಳಲ್ಲಿ ಅಭಿನಯಿಸಲಿದ್ದಾರೆ.
ಬಿಡುವಿಲ್ಲದ ವೇಳಾಪಟ್ಟಿ ಹೊಂದಿರುವ ಸುದೀಪ್ ಅವರ ಭವಿಷ್ಯದ ಯೋಜನೆಗಳೇನೆಂದು ತಿಳಿಯಲು ನಾವು ಕೆಲ ಸಮಯ ಕಾಯಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT