ಸಿನಿಮಾ ಸುದ್ದಿ

ಬೀರ್ಬಲ್ ಟ್ರೈಲಜಿ ನಲ್ಲಿ ಹಾಲಿವುಡ್ ವರ್ಣಚಿತ್ರಕಾರ ಕೈಚಳಕ

Srinivas Rao BV
ಎಂ ಜಿ ಶ್ರೀನಿವಾಸ್ ಅವರ ಮುಂದಿನ ಚಿತ್ರ  ಬಿರ್ಬಾಲ್ ಟ್ರೈಲಜಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರತಂಡ  ಕಲರ್ ಗ್ರೇಡಿಂಗ್ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.  
ಚಿತ್ರದಲ್ಲಿ ವರ್ಣಚಿತ್ರಕಾರು ಪ್ರಮುಖ ಪಾತ್ರ ವಹಿಸಲಿದ್ದು, ಕಥೆ ಹಾಗೂ ತಂತ್ರಜ್ಞನ ಕೆಲಸದ ಬಹುತೇಕ ಭಾಗವನ್ನು ವರ್ಣಚಿತ್ರಕಾರರೇ ಆವರಿಸಲಿದ್ದಾರೆ. ಈ ಸಿನಿಮಾದಲ್ಲಿ ವರ್ಣಚಿತ್ರಕಾರರ ಪಾತ್ರ ಯಾವುದೇ ಕಲೆಗೂ ಕಡಿಮೆ ಇಲ್ಲ ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್. ಬಾರ್ಬಾಲ್ ಟ್ರೈಲಜಿ ಚಿತ್ರಕ್ಕಾಗಿ ಹಾಲಿವುಡ್ ಕಲರಿಸ್ಟ್ ವಾಲ್ಟರ್ ಕವಟೋಯಿ ಜೊತೆ ಕೈಜೋಡಿಸಿರುವ ಅವರು, ಹಾಲಿವುಡ್ ಸಿನಿಮಾಗಳಲ್ಲಿರುವಂತಹ ದೃಶ್ಯಾವಳಿಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವುದಾಗಿ ನಿರ್ದೇಶಕ ಶ್ರೀನಿವಾಸ್ ಹೇಳಿದ್ದಾರೆ. 
ವಾಲ್ಟರ್ ಕವಟೋಯಿ ಅವರ ಡಾಕ್ಯುಮೆಂಟರಿ, ಜಾಹಿರಾತು, ಕಿರು ಚಿತ್ರಗಳು ಅದ್ಭುತವಾಗಿ ಮೂಡಿಬಂದಿದ್ದು, ಬಿರ್ಬಾಲ್ ಟ್ರೈಲಜಿ ಚಿತ್ರಕ್ಕೆ ವರ್ಣಚಿತ್ರಕಾರನಾಗಿ ಅವರನ್ನೇ ಆಯ್ಕೆ ಮಾಡಿದೆ ಎಂದು ಎಂ ಜಿ ಶ್ರೀನಿವಾಸ್ ಹೇಳಿದ್ದಾರೆ. ಅಮೆರಿಕ ಮೂಲದ ವಾಲ್ಟರ್ ಕವಟೋಯಿ 10 ವರ್ಷಗಳ ಅನುಭವ ಹೊಂದಿದ್ದು, ಕಲರಿಸ್ಟ್ ಸೊಸೈಟಿ ಇಂಟರ್ನ್ಯಾಷನಲ್ ನ ಸದಸ್ಯರೂ ಆಗಿದ್ದಾರೆ. 
SCROLL FOR NEXT