ಅರವಿಂದ್ ಅಯ್ಯರ್-ನಿವೇದಿತಾ 
ಸಿನಿಮಾ ಸುದ್ದಿ

ಶಿವಣ್ಣ ಪುತ್ರಿ ನಿವೇದಿತಾ ನಿರ್ಮಾಣದ ವೆಬ್ ಸಿರೀಸ್‌ನಲ್ಲಿ ಅರವಿಂದ್ ಅಯ್ಯರ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ವೆಬ್ ಸೀರಿಸ್ ವೊಂದನ್ನು ನಿರ್ಮಿಸಲಿದ್ದು ಇದರಲ್ಲಿ ಭೀಮಸೇನ ನಳಮಹಾರಾಜದ ನಾಯಕ ಅರವಿಂದ್ ಅಯ್ಯರ್...

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ವೆಬ್ ಸೀರಿಸ್ ವೊಂದನ್ನು ನಿರ್ಮಿಸಲಿದ್ದು ಇದರಲ್ಲಿ ಭೀಮಸೇನ ನಳಮಹಾರಾಜದ ನಾಯಕ ಅರವಿಂದ್ ಅಯ್ಯರ್ ನಾಯಕನಾಗಿ ನಟಿಸುತ್ತಿದ್ದಾರೆ. 
ಶ್ರೀಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿ ಹೇಟ್ ಯು ರೋಮಿಯೋ ವೆಬ್ ಸೀರಿಸ್ ಅನ್ನು ನಿವೇದಿತಾ ನಿರ್ಮಾಣ ಮಾಡುತ್ತಿದ್ದು ಈ ಹಿಂದೆ ಲೂಸ್ ಕನೆಕ್ಷನ್ ವೆಬ್ ಸೀರಿಸ್ ನಿರ್ದೇಶಿಸಿದ್ದ ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ಈ ವೆಬ್ ಸೀರಿಸ್ ಅನ್ನು ನಿರ್ದೇಶಿಸುತ್ತಿದ್ದಾರೆ. 
ಹೇಟ್ ಯು ರೋಮಿಯೋ ವೆಬ್ ಸೀರಿಸ್ ನ ಹಿಂದೂ ಆವೃತ್ತಿಯಲ್ಲಿ ಸೈಫ್ ಅಲಿ ಖಾನ್, ಮಾಧವನ್ ಮತ್ತು ತೆಲುಗಿನ ಆವೃತ್ತಿಯಲ್ಲಿ ಜಗಪತಿ ಬಾಬು ಅವರು ಅಭಿನಯಿಸಲಿದ್ದಾರೆ. ದೊಡ್ಡ ನಟರ ಜೊತೆ ಅಭಿನಯಿಸುತ್ತಿರುವುದು ನನಗೆ ಚಾಲೆಂಜ್ ಎಂದು ಅರವಿಂದ್ ಅಯ್ಯರ್ ಹೇಳಿದ್ದಾರೆ. 
ಮೂವತ್ತು ನಿಮಿಷಗಳ ಏಳು ಸಂಚಿಕೆಗಳು ಈ ವೆಬ್ ಸೀರಿಸ್ ನಲ್ಲಿರಲಿದೆ. ವಿಯೆಟ್ನಾಂನಲ್ಲಿ ಸಂಪೂರ್ಣ ಚಿತ್ರೀಕರಣ ಮಾಡಲಾಗುತ್ತಿದ್ದು ಬೆಂಗಳೂರಿನ ಕೆಲ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?