ನಟಿ ಬಿ ಜಯಶ್ರೀ 
ಸಿನಿಮಾ ಸುದ್ದಿ

'ಅಮ್ಮನ ಮನೆ'ಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಗೆ ತಾಯಿ ಬಿ ಜಯಶ್ರೀ

ರಾಘವೇಂದ್ರ ರಾಜ್ ಕುಮಾರ್ ಅವರು ಹಲವು ವರ್ಷಗಳ ನಂತರ ಮತ್ತೆ ನಟನೆಗೆ ಮರಳುತ್ತಿರುವುದು ...

ರಾಘವೇಂದ್ರ ರಾಜ್ ಕುಮಾರ್ ಅವರು ಹಲವು ವರ್ಷಗಳ ನಂತರ ಮತ್ತೆ ನಟನೆಗೆ ಮರಳುತ್ತಿರುವುದು ಸುದ್ದಿಯಾಗಿದೆ. ನಿಖಿಲ್ ಮಂಜು ಅವರ ನಿರ್ದೇಶನದ ಅಮ್ಮನ ಮನೆ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ನಾಡಿದ್ದು 15ರಂದು ಮುಹೂರ್ತ ನಡೆಯಲಿದ್ದು ಅದರಲ್ಲಿ ಸುಮಾರು 50 ವರ್ಷದ ವ್ಯಕ್ತಿಯ ಪಾತ್ರದ ರಾಘವೇಂದ್ರ ರಾಜ್ ಕುಮಾರ್ ಅವರ ಫೋಟೋ ಬಿಡುಗಡೆಯಾಗಿದ್ದು ವೈರಲ್ ಆಗಿದೆ. ಅಂದು ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಕೂಡ ಹೌದು.

ಚಿತ್ರದ ಮತ್ತೊಂದು ಆಕರ್ಷಣೆ ಖ್ಯಾತ ನಟಿ, ಹಾಡುಗಾರ್ತಿ ಹಾಗೂ ಡಬ್ಬಿಂಗ್ ಕಲಾವಿದೆ ಬಿ ಜಯಶ್ರೀ. ಇಲ್ಲಿ ಜಯಶ್ರೀ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ತಾಯಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಮತ್ತೊಬ್ಬ ರಂಗಭೂಮಿ ಕಲಾವಿದೆ ಮಾನಸಿ ಸುಧೀರ್ ರಾಘವೇಂದ್ರ ರಾಜ್ ಕುಮಾರ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿಣಿ ನಾಗೇಶ್ ಕೂಡ ಚಿತ್ರದ ಭಾಗವಾಗಿದ್ದಾರೆ.

ಸೆಪ್ಟೆಂಬರ್ 5ರಿಂದ ಚಿತ್ರೀಕರಣ ಆರಂಭವಾಗಲಿದೆ. ಆತ್ಮಶ್ರೀ ಮತ್ತು ಆರ್ ಎಸ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಕಥೆ ಬರೆದಿದ್ದು ಶ್ರೀಲಲಿತೆ. ಬಿ ಶಿವಾನಂದ್ ಅವರ ಸಂಭಾಷಣೆ, ಸಮೀರ್ ಕುಲಕರ್ಣಿ ಅವರ ಸಂಗೀತ ಮತ್ತು ಮನೋಜವ ಗಳಗಳಿ ಅವರ ಸಾಹಿತ್ಯವಿದೆ. ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ ಮತ್ತು ಎನ್ ಆದಿತ್ಯ ಕುಣಿಗಲ್ ಅವರು ಸಂಪಾದಕರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT