ಭರಣಿ ಚಿತ್ರದ ಫೋಟೋಶೂಟ್ 
ಸಿನಿಮಾ ಸುದ್ದಿ

ಕೇರಳದಲ್ಲಿ ಆನೆ ಜೊತೆಗೆ ಫೋಟೋ ಶೂಟ್ ಮಾಡಿದ 'ಭರಣಿ' ಚಿತ್ರತಂಡ

ಚೊಚ್ಚಲ ನಿರ್ದೇಶಕ ಚರಣ್ ರಾಜ್ ನಟರಾದ ಮಾಧವ ಮತ್ತು ಸ್ವಾತಿ ಕೊಂಡೆಯ ಜೊತೆ ದೇವರನಾಡು ...

ಚೊಚ್ಚಲ ನಿರ್ದೇಶಕ ಚರಣ್ ರಾಜ್ ನಟರಾದ ಮಾಧವ ಮತ್ತು ಸ್ವಾತಿ ಕೊಂಡೆಯ ಜೊತೆ ದೇವರನಾಡು ಕೇರಳಕ್ಕೆ ಕಾಲಿಟ್ಟಿದ್ದು ತಮ್ಮ ಚಿತ್ರದ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಯಾಕೆಂದರೆ ಚಿತ್ರದಲ್ಲಿ ಆನೆ ಮುಖ್ಯ ಪಾತ್ರ ವಹಿಸುತ್ತದೆ. ಮತ್ತು ಚಿತ್ರದ ಒಂದು ಭಾಗದಲ್ಲಿ ಆನೆಯ ಸುತ್ತಲೇ ಕಥೆ ಸುತ್ತುತ್ತದೆ. ಹೀಗಾಗಿ ಆನೆಯ ಜೊತೆಗೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಆನೆಯ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಪ್ರಾಣಿ ಮಂಡಳಿಯಿಂದ ಅನುಮತಿ ಪಡೆಯಲು ನಾಲ್ಕು ತಿಂಗಳು ಹಿಡಿಯಿತು ಎನ್ನುತ್ತಾರೆ  ಚರಣ್ ರಾಜ್.

ಪ್ರಾಣಿ ಮಂಡಳಿಯಿಂದ ಅನುಮತಿ ಸಿಕ್ಕಿದ ಕೂಡಲೇ ಕಳೆದ ಭಾನುವಾರ ಚಿತ್ರತಂಡ ಕೇರಳಕ್ಕೆ ಪ್ರಯಾಣ ಬೆಳೆಸಿತು. ಕೃಷ್ಣಪುರಂನಲ್ಲಿ ಶೂಟ್ ಮಾಡಿದರು, ಆ ಸಂದರ್ಭದಲ್ಲಿ ಅಲ್ಲಿ ಯಾವುದೇ ಜೋರು ಮಳೆ, ನೆರೆ ಪ್ರವಾಹ ಬಂದಿರಲಿಲ್ಲವಂತೆ.

ಪಾರ್ವತಮ್ಮನ ಮಗ ಎಂಬ ಟ್ಯಾಗ್ ಲೈನ್ ನೊಂದಿಗೆ ಭರಣಿ ಚಿತ್ರದ ಮುಹೂರ್ತ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ರಾಜ್ ಕುಮಾರ್ ಕುಟುಂಬದವರಲ್ಲಿ ಯಾರಾದರೊಬ್ಬರು ಚಿತ್ರ ಮುಹೂರ್ತಕ್ಕೆ ಚಾಲನೆ ನೀಡಬೇಕೆಂದು ಆಶಿಸುತ್ತೇವೆ. ಶಿವರಾಜ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಿದ್ದು ಅವರು ಸಿಗುವ ದಿನಾಂಕಕ್ಕೆ ತಕ್ಕಂತೆ ಮುಹೂರ್ತ ಇಟ್ಟುಕೊಳ್ಳಲಿದ್ದೇವೆ ಎಂದರು.

ಯೋಗೇಶ್ ಅವರು ಸಾಜಿದ್ ಖುರೇಷಿ ಅವರ ಸಹಾಯದೊಂದಿಗೆ ಚಿತ್ರ ನಿರ್ಮಿಸುತ್ತಿದ್ದಾರೆ. ಸಾಜಿದ್ ನಾಗರಹಾವು ಚಿತ್ರ ತಯಾರಿಸಿದವರು. ವಿವೇಕ್ ಚಕ್ರವರ್ತಿ ಅವರ ಸಂಗೀತ ಮತ್ತು ಕೆ ಆರ್ ಶಿವಕುಮಾರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT