ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ 
ಸಿನಿಮಾ ಸುದ್ದಿ

ವಾಜಪೇಯಿ ಅತ್ಯಂತ ಅಪರೂಪದ ಮನುಷ್ಯ: ನಟ ಅಮಿತಾಭ್ ಬಚ್ಚನ್

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ಮನುಷ್ಯರಾಗಿದ್ದರು ಎಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ...

ಮುಂಬೈ: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ಮನುಷ್ಯರಾಗಿದ್ದರು ಎಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ. 
ಸಾಮಾಜಿಕ ಜಾಲತಾಣಗಳಲ್ಲಿ ವಾಜಪೇಯಿಯವರ ಬಗ್ಗೆ ಬರೆದಿರುವ ಅಮಿತಾಭ್ ಬಚ್ಚನ್ ಅವರು, ವಾಜಪೇಯಿಯವರನ್ನು ಕೊಂಡಾಡಿದ್ದಾರೆ. 
ವಾಜಪೇಯಿಯವರು ನನ್ನ ತಂದೆ ಮತ್ತು ಅವರ ಕೃತಿಗಳಿಗೆ ಅಭಿಮಾನಿಯಾಗಿದ್ದರು. ನನ್ನ ತಂದೆಗೆ ವಾಜಪೇಯಿ ಗೊತ್ತಿದ್ದರು. ನನ್ನ ತಂದೆ ಹರಿವಂಶ ರೈ ಕೂಡ ವಾಜಪೇಯಿಯವರ ಭಾಷಣದ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. 
ವಾಜಪೇಯಿಯವರ ಭಾಷಣದ ಕೌಶಲ್ಯ ಯಾರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಅವರು ಬಳಕೆ ಮಾಡುತ್ತಿದ್ದ ಪದಗಳು ಆದರ್ಶವಾಗಿರುತ್ತಿತ್ತು. ಅವರ ಉಚ್ಛಾರಣೆಯಲ್ಲಿ ಬಲವಿರುತ್ತಿತ್ತು. ಒಂದೊಂದು ಪದ ಸಾವಿರಾರು ಅರ್ಥವನ್ನು ನೀಡುತ್ತಿತ್ತು. ವ್ಯಕ್ತಿ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವೇ ಇರುತ್ತಿರಲಿಲ್ಲ. ಇದು ಅವರ ಪ್ರತಿಭೆಯಾಗಿತ್ತು. ಸಾರ್ವಜನಿಕ ಭಾಷಣಗಳು ಹಾಗೂ ಸಂಸತ್ ಭವನದಲ್ಲಿ ಅವರ ಭಾಷಣಗಳೇ ಇದಕ್ಕೆ ಸಾಕ್ಷಿಯಾಗಿವೆ. ಕವಿ, ಬರಹಗಾರ, ರಾಜಕಾರಣಿ, ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ವ್ಯಕ್ತಿಯಾಗಿದ್ದರು.
ಶ್ರೇಷ್ಠ ನಾಯಕರೆಂಬ ಪ್ರಾಮುಖ್ಯತೆ ಹೊಂದಿದ್ದರೂ ನನ್ನ ತಂದೆಯನ್ನು ಭೇಟಿ ಮಾಡಲು ಹಿಂಜರಿಯುತ್ತಿರಲಿಲ್ಲ. ಪ್ರಮುಖವಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನನ್ನ ತಂದೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ವಾಜಪೇಯಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಾನೂ ಕೂಡ ಸ್ಥಳದಲ್ಲಿದ್ದೆ. ಅವರ ಸಹಾನುಭೂತಿ ಮತ್ತು ಕಾಳಜಿ ಅತ್ಯಂತ ಮೃದುವಾಗಿತ್ತು. ಲಖನೌದಲ್ಲಿ ನನ್ನ ತಂದೆ ಹೆಸರಿನ ಅಂಚೆ ಚೀಟಿ ಚಾಲನೆಗೆ ಅಟಲ್ ಜೀ ಅವರು ಒಪ್ಪಿಗೆ ನೀಡಿದ್ದರು ಎಂದು ಹಳೆಯ ನೆನಪುಗಳನ್ನು ನೆನೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT