ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಿ- ಟೌನ್ ಗೆ ವೇದಿಕಾ ಎಂಟ್ರಿ
ಶಿವಲಿಂಗ ಖ್ಯಾತಿಯ ನಟಿ ವೇದಿಕಾ ಅವರ ಮುಂದಿನ 'ಹೋಮ್ ಮಿನಿಸ್ಟರ್ ' ಸಿನಿಮಾದ ಕೊನೆಯ ಬಿಟ್ ನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಇದೀಗ ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ.
ಶಿವಲಿಂಗ ಖ್ಯಾತಿಯ ನಟಿ ವೇದಿಕಾ ಅವರ ಮುಂದಿನ 'ಹೋಮ್ ಮಿನಿಸ್ಟರ್ ' ಸಿನಿಮಾದ ಕೊನೆಯ ಬಿಟ್ ನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಅದೃಷ್ಟ ಪರೀಕ್ಷೆ ಗುರಿಯೊಂದಿಗೆ ಬಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ.
ಇಮ್ರಾನ್ ಹಸ್ಮಿ ಜೊತೆಗೆ ತಾತ್ಕಾಲಿಕ ಶೀರ್ಷಿಕೆಯೊಂದರ ಸಿನಿಮಾನದಲ್ಲಿ ಅಭಿನಯಿಸಿರುವ ವೇದಿಕಾ ಸಿನಿಮಾಗಳು ನನ್ನನ್ನು ಓಡುವಂತೆ ಮಾಡಿದ್ದು, ಜೀವಂತವಾಗಿ ಇಟ್ಟಿವೆ ಹೇಳುತ್ತಾರೆ.
ಎಲ್ಲಾ ಕಲಾವಿದರ ಬದುಕಿನಲ್ಲಿಯೂ ದೊಡ್ಡದಾದ ಹಾಗೂ ಉತ್ತಮವಾದ ಸಂದರ್ಭ ಬಂದೇ ಬರುತ್ತಿದೆ. ಆದೇ ರೀತಿಯಲ್ಲಿ ತನ್ನಗೂ ಬಾಲಿವುಡ್ ನಲ್ಲಿ ಅಭಿನಯಿಸುವ ಅವಕಾಶ ದೊರೆತಿದೆ.ಯೋಚಿಸಿ ಬಾಲಿವುಡ್ ಗೆ ಎಂಟ್ರಿ ನೀಡಿದ್ದೇನೆ. ಚಿತ್ರಕ್ಕೆ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ಮಾರಿಷಸ್ ನಲ್ಲಿ ಚಿತ್ರೀಕರಿಸಲಾಗಿದ್ದು, ಚಿತ್ರದ ಚಿತ್ರೀಕರಣವು ಪೂರ್ಣಗೊಂಡಿದೆ, "ಎಂದು ಅವರು ಹೇಳುತ್ತಾರೆ.
ಇಮ್ರಾನ್ ಹಸ್ಮಿ ಜೊತೆಗೆ ಅಭಿನಯಿಸಿದದ್ದು ಅಸಾಧಾರಣ ಅನುಭವ ಎಂದು ವೇದಿಕಾ ತನ್ನ ಅನುಭವವನ್ನು ಹಂಚಿಕೊಂಡರು. ಬಾಲಿವುಡ್ ನಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಿದ್ದು, ಈಗ ಉತ್ತರ ಭಾಗದಲ್ಲೂ ವೀಕ್ಷಕರನ್ನು ಸಂಪರ್ಕಿಸುವಂತಾಗಿದೆ ಎಂದು ಹೇಳಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.