ರವಿಚಂದ್ರನ್ ಮತ್ತು ಉಪೇಂದ್ರ 
ಸಿನಿಮಾ ಸುದ್ದಿ

'ರವಿ ಚಂದ್ರ'ರಾಗಿ ಬರುತ್ತಿದ್ದಾರೆ ಕ್ರೇಜಿಸ್ಟಾರ್-ರಿಯಲ್ ಸ್ಟಾರ್!

ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಮುಂದಿನ ಚಿತ್ರಕ್ಕೆ ಇಬ್ಬರು ಸ್ಟಾರ್ ಗಳನ್ನು ನಾಯಕರಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ, ...

ಬೆಂಗಳೂರು: ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಮುಂದಿನ ಚಿತ್ರಕ್ಕೆ ಇಬ್ಬರು ಸ್ಟಾರ್ ಗಳನ್ನು ನಾಯಕರಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ, ರವಿ ಚಂದ್ರ ರಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದಾರೆ. ಸೋಮವಾರ ಚಿತ್ರದ ಶೂಟಿಂಗ್ ಆರಂಭವಾಗಿದ್ದು, 2019ರ ಜನವರಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಉದ್ದೇಶವಿದೆ.
ಮೊದಲ ಬಾರಿಗೆ ರವಿಚಂದ್ರನ್ ಮತ್ತು ಉಪೇಂದ್ರ ಒಟ್ಟಿಗೆ ನಟಿಸುತ್ತಿದ್ದಾರೆ,  ಶಾನ್ವಿ ಶ್ರೀವಾತ್ಸವ ಮತ್ತು ನಿಮಿತಾ ರತ್ನಾಕರ್ ನಾಯಕಿಯರಾಗಿದ್ದು, ಪ್ರದೀಪ್ ರಾವತ್ ಹಲವು ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ರವಿಚಂದ್ರ ಸಿನಿಮಾದಲ್ಲಿ ಅವರು ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ,
ತೆಲುಗಿನಬಾಲುವು ಸಿನಿಮಾದಿಂದ ಪ್ರೇರಣೆಗೊಂಡು ಕನ್ನಡಕ್ಕೆ ಅನುಗುಣವಾಗಿ ಚಿತ್ರಕತೆ ಸಿದ್ಧ ಪಡಿಸಲಾಗಿದೆ. ಸೆಪ್ಟಂಬರ್ 18 ರಂದು ನಟ ಉಪೇಂದ್ರ ಹುಟ್ಟು ಹಬ್ಬವಿದ್ದು, ಅಂದು ಸಿನಿಮಾ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ, ನವೆಂಬರ್ 1ರಂದು ರವಿಚಂದ್ರನ್ ಹುಟ್ಟು ಹಬ್ಬವಿದ್ದು ಮತ್ತೊಂದು ಟೀಸರ್ ಬಿಡುಗಡೆಗೆ ನಿರ್ಧರಿಸಲಾಗಿದೆ.
ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಆರ್ ಎಸ್  ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಾಣವಾಗುತ್ತಿದೆ. ಮೂರನೇ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT