ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿಲ್ಲದಂತೆ ಹಲವು ಸಿನಿಮಾ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ, ಅಭಿಮಾನಿಗಳು ದರ್ಶನ್ 50ನೇ ಸಿನಿಮಾ ಕುರುಕ್ಷೇತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 51ನೇ ಚಿತ್ರ ಯಜಮಾನ ಕೂಡ ಬಿಜುಗಡೆಗೆ ಸಿದ್ಧವಾಗಿದೆ. ತರುಣ್ ಶ್ರೀಧರ್ ನಿರ್ದೇಶನದ ಸಿನಿಮಾ ಶೂಟಿಂಗ್ ಕೂಡ ಶೀಘ್ರವೇ ಆರಂಭವಾಗಲಿದೆ.
ಯಜಮಾನ ಸಿನಿಮಾದ ಇನ್ನೂ 2 ಹಾಡುಗಳ ಶೂಟಿಂಗ್ ಬಾಕಿ ಉಳಿದಿದ್ದು, ಮಂಗಳವಾರ ಹಾಡಿನ ಚಿತ್ರೀಕರಣ ನಡೆಯಿತು, ಅಕ್ಟೋಬರ್ ತಿಂಗಳಿನಲ್ಲಿ ಉಳಿದ 2 ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ.
ಸೆಪ್ಟಂಬರ್ 10ರಂದು ಒಡೆಯ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ತರುಣ್ ಶ್ರೀಧರ್ ನಿರ್ದೇಶನದ ಒಡೆಯ ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ನಾಯಕಿಯ ಪೈನಲ್ ಆಗಿಲ್ಲ.
ದರ್ಶನ್ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ಎಸ್. ನಾರಾಯಣ್ ಪುತ್ರ ದರ್ಶನ್ ಸಹೋದರನಾಗಿ ಅಭಿನಯಿಸುತ್ತಿದ್ದಾರೆ. ಒಡೆಯ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos