ಡಬ್ ಸ್ಮ್ಯಾಶ್ ನಲ್ಲಿ ದಾಖಲೆ ಬರೆದ 'ಅಯೋಗ್ಯ'
ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರೀ ಹವಾ ಸೃಷ್ಟಿಸುತ್ತಿದೆ. ಏನಮ್ಮೀ ಏನಮ್ಮಿ ಎಂಬ ಹಾಡು ಸಾಮಾಜಿಕ ...
ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರೀ ಹವಾ ಸೃಷ್ಟಿಸುತ್ತಿದೆ. ಏನಮ್ಮೀ ಏನಮ್ಮಿ ಎಂಬ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ವಿಜಯ್ ಪ್ರಕಾಶ್ ಮತ್ತು ಪಲಾಕ್ ಮುಚ್ಚಲ್ ಹಾಡಿರುವ ಈ ಸಾಂಗ್ ಗೆ ಅರ್ಜುನ್ಯ ಜನ್ಯ ಸಂಗೀತ ನೀಡಿದ್ದು, ಯೂ ಟ್ಯೂಬ್ ನಲ್ಲಿ 12 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ, ಡಬ್ ಸ್ಮ್ಯಾಶ್ ವಿಡಿಯೋವನ್ನು 1.5 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಸಾಮಾನ್ಯವಾಗಿ ಡಬ್ ಸ್ಮ್ಯಾಶ್ ವಿಡಿಯೋ ವನ್ನು 50 ಸಾವಿರ ಮಂದಿ ವೀಕ್ಷಿಸುತ್ತಾರೆ, ಆದರೆ ಏನಮ್ಮಿ ಏನಮ್ಮಿ ಹಾಡು ಇದನ್ನೆಲ್ಲಾ ಮೀರಿದೆ. ಇದರ ಕ್ಯಾಚಿ ಲಿರಿಕ್ಸ್ ಈ ಪ್ರಮಾಣದಲ್ಲಿ ಹೆಚ್ಚಲು ಕಾರಣ, ಡ್ಯಾನ್ಯ್ ವಿಡಿಯೋ ಕೂಡ 3 ರಿಂದ 4 ಲಕ್ಷ ಮಂದಿ ವೀಕ್ಷಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.