ಧನಂಜಯ್ 
ಸಿನಿಮಾ ಸುದ್ದಿ

ಭೈರವ ಗೀತಾ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ: ಧನಂಜಯ್

ಸೂಪರ್ ಹಿಟ್ ' ಟಗರು ಚಿತ್ರದಲ್ಲಿನ ಡಾಲಿ ಪಾತ್ರದಿಂದ ಖ್ಯಾತಿಯಾಗಿರುವ ಧನಂಜಯ್ ಮುಂದಿನ ಚಿತ್ರ ಭೈರವ - ಗೀತಾ ಭಾರೀ ನಿರೀಕ್ಷೆ ಮೂಡಿಸಿದೆ

ಸೂಪರ್ ಹಿಟ್ ಟಗರು ಚಿತ್ರದಲ್ಲಿನ ಡಾಲಿ ಪಾತ್ರದಿಂದ ಖ್ಯಾತಿಯಾಗಿರುವ ಧನಂಜಯ್ ಮುಂದಿನ ಚಿತ್ರ ಭೈರವ ಗೀತಾ ಭಾರೀ ನಿರೀಕ್ಷೆ ಮೂಡಿಸಿದೆ.
ಯುವ ನಿರ್ದೇಶಕ ಸಿದ್ಧಾರ್ಥ ಟಾತೊಳ್ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ  ನಿರ್ದೇಶಿಸಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿ ಆವೃತ್ತಿಯಲ್ಲಿ  ಮೂಡಿಬರುತ್ತಿದೆ.
ಸಿನಿಮಾವೊಂದರ ಯಶಸ್ಸಿಗೆ ಪಟ್ಟ ಶ್ರಮದ ಬೆನ್ನಲ್ಲೇ ಹೆಸರು, ಹಣ ಎಲ್ಲವೂ ದೊರೆಯುವ ಅವಕಾಶ ಇರುತ್ತದೆ ಎನ್ನುವ ಧನಂಜಯ್, ಜನರು ತಮ್ಮನ್ನು ನಟನಾಗಿ ಗುರುತಿಸಿದ್ದಾರೆ. ಇದಷ್ಟೆ ಸಾಕು ಎನ್ನುತ್ತಾರೆ.
ಈ ಚಿತ್ರದ ಮೂಲಕ ಟಾಲಿವುಡ್ ನಲ್ಲಿ ತಾನೂ ಹೆಜ್ಜೆ ಇರಿಸಿದ್ದು, ಚಿತ್ರ ಯಶಸ್ವಿಯಾಗಲಿದೆ ಎಂಬ ಭರವಸೆ ಹೊಂದಿರುವುದಾಗಿ ಹೇಳುವ ಧನಂಜಯ್, ಮತ್ತೊಂದು ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಹೊಸ ಕಲ್ಪನೆಗಳು ಹೊಳೆಯುತ್ತವೆ. ಸಾಕಷ್ಟು ಕಲಿಯುವುದಾಗಿ ಹೇಳಿದ್ದಾರೆ.ಭೈರವ ಗೀತಾ ಹಿಂಸಾತ್ಮಕ ಪ್ರೇಮ ಕಥೆಯಾಗಿದ್ದು, ಧನಂಜಯ್ ಕೂಲಿ ಪಾತ್ರದಲ್ಲಿ  ಅಭಿನಯಿಸಿದ್ದಾರೆ
ಕಾರ್ಮಿಕ ವರ್ಗ ಹಾಗೂ ಶ್ರಿಮಂತ ವರ್ಗದವರ ನಡುವಿನ ಹೋರಾಟವನ್ನು ಭೈರವ ಗೀತದಲ್ಲಿ ವೈಭವೀಕರಿಸಲಾಗಿದ್ದು, ಇದೊಂದು ಹಿಂಸಾತ್ಮಕ ಪ್ರೇಮ ಕಥೆ ಇರುವ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!