ಮೇಘನಾ ಗಾಂವ್ಕರ್ 
ಸಿನಿಮಾ ಸುದ್ದಿ

ಎರಡು ವರ್ಷದ ಬಳಿಕ, 'ಕಾಳಿದಾಸ'ನಿಗೆ ಜತೆಯಾಗಿ ತೆರೆಯ ಮೇಲೆ ಮೇಘನಾ!

ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ" ಬಳಿಕ ಎರಡು ವರ್ಷದ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದ ನಟಿ ಮೇಘನಾ ಗಾಂವ್ಕರ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ. ತ

ಬೆಂಗಳೂರು: "ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ" ಬಳಿಕ ಎರಡು ವರ್ಷದ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದ ನಟಿ ಮೇಘನಾ ಗಾಂವ್ಕರ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ. ತನಗೆ ಒಪ್ಪಿಗೆಯಾಗುವ ಕಥೆ ಸಿಕ್ಕುವವರೆಗೆ ಕಾಯಲು ಸಿದ್ದವಾದ ನಟಿ ಎರಡು ವರ್ಷದಿಂದ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಕವಿರಾಜ್ ನಿರ್ದೇಶನದ "ಕಾಳಿದಾಸ ಕನ್ನಡ ಮೇಷ್ಟ್ರು" ಚಿತ್ರಕ್ಕೆ ಸಹಿ ಹಾಕಿರುವ ಮೇಘನಾ "ಈ ಚಿತ್ರ ನನ್ನ ಕಂಬ್ಯಾಕ್ ಚಿತ್ರ ಎನ್ನಲು ನಾನು ಬಯಸುವುದಿಲ್ಲ.ನಾನು ಸಾಕಷ್ಟು ಕಥೆಗಳನ್ನು ಕೇಳಿದ್ದೆ.ಆದರೆ ಹಣದ ವಿಚಾರ ಸೇರಿದಂತೆ ಯಾವ ವಿಷಯದಲ್ಲಿಯೂ ಯಾವೊಂದು ಕಥೆಯೂ ನನಗೆ ಸೂಕ್ತವಾಗಿ ಕಾಣಿಸಲಿಲ್ಲ" ಎಂದಿದ್ದಾರೆ.
ಹಲವು ಕಾರಣಗಲಿಂದ ಮೇಘನಾಗೆ ಈ ಚಿತ್ರ ಬಹಳ ಮುಖ್ಯವೆನಿಸಿದೆ. ಅದರಲ್ಲಿಯೂ ನವರಸ ನಾಯಕ ಜಗ್ಗೇಶ್ ಜತೆಗೆ ನಟಿ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು ಅವರಿಗೆ ರೋಮಾಂಚನದ ಅನುಭವ ನಿಡಿದೆ."ಕವಿರಾಜ್ ನನಗೆ ಈ ಕಥೆ ಹೇಳುತ್ತಿದ್ದಂತೆ ನನಗೆ ಕಥೆ ಬಹಳ ಇಷ್ಟವಾಗಿತ್ತು. ನಾನಿದನ್ನು ಹೇಗೆ ತೆಗೆದುಕೊಳ್ಳುವೆನೋ ಗೊತ್ತಿಲ್ಲ ಆದರೆ ಕಥೆಯಂತೂ ಬಹಳ ಅದ್ಭುತವಾಗಿತ್ತು" ಕಾಳಿದಾಸ ಕನ್ನಡ ಮೇಷ್ಟ್ರು ಸಮಾಜದ ನಾನಾ ವಲಯಗಳನ್ನು ಪ್ರತಿನಿಧಿಸುವ ಕಥೆಯಾಗಿದೆ.
ಜಗ್ಗೇಶ್ ಕನ್ನಡ ಪರವಾಗಿದ್ದರೆ ನಾನು ತಕ್ಕಷ್ಟು ಇಂಗ್ಲಿಷ್ ಮಾತನಾಡುವ ಪಾತ್ರದಲ್ಲಿ ಕಾಣಿಸುತ್ತೇನೆ.ವಿಶೇಷವಾಗಿ ನನ್ನ ಶಾಲಾ ದಿನಗಳಿಂದಲೇ ನಾನು ಯಾವ ಭಾಷೆಯಲ್ಲಿಯೇ ಮಾತನಾಡಿದ್ದರೂ ಇಂಗ್ಲಿಷ್ ಮಾತ್ರ ತುಸು ಕಷ್ಟವೆನುಸಿತ್ತು.ಚಿತ್ರದುದ್ದಕ್ಕೆ ನಮ್ಮ ಜುಗಲ್ಬಂದಿ ಬಹಳ ಚೆನ್ನಾಗಿತ್ತು. ವಿಶೇಷವಾಗಿ ಜಗ್ಗೇಶ್ ಅವರ ಪಂಚಿಂಗ್ ಡೈಲಾಗ್ ಗಳು ನನಗಿಷ್ಟವಾದವು ಎಂದು ನಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇಂದು (ಸೋಮವಾರ) ಚಿತ್ರದ ಮಹೂರ್ತ ನೆರವೇರಲಿದೆ, ಚಿತ್ರತಂಡ ಇದೇ ಕೂಡಲೇ ಚಿತ್ರೀಕರಣ ಪ್ರಾರಂಭಿಸಲು ಸರ್ವ ಸನ್ನದ್ದವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?