ಬೆಂಗಳೂರು: ಮತ್ತೊಂದು ತಾರಾ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗುತ್ತಿದೆ. ಐಂದಿತ್ರಾ ರೇ ಹಾಗೂ ದಿಗಂತ್ ಇಂದು ಮದುವೆ ಆಗುತ್ತಿದ್ದಾರೆ.
ನಿನ್ನೆ ಅದ್ದೂರಿಯಾಗಿ ಅರಿಶಿಣ ಶಾಸ್ತ್ರ ನೆರವೇರಿಸಿಕೊಂಡಿರುವ ಈ ಜೋಡಿ,ಬೆಂಗಳೂರಿನ ನಂದಿಬೆಟ್ಟದ ಹತ್ತಿರ ವಿರುವ ಖಾಸಗಿ ರೆಸಾರ್ಟ್ ನಲ್ಲಿ ಇಂದು ಸಂಜೆ ಆರು ಗಂಟೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ವಿವಾಹ ಮಹೋತ್ಸವಕ್ಕೆ ಎರಡೂ ಕುಟುಂಬದ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ನಟ ಸುದೀಪ್, ದರ್ಶನ್, ಗಣೇಶ್ , ಪ್ರೇಮ್, ಸೇರಿದಂತೆ ಹಲವು ತಾರೆಯರು ಶುಭ ಮುಹೂರ್ತಕ್ಕೆ ಸಾಕ್ಷಿಯಾಗಲಿದ್ದಾರೆ.