ಸಿನಿಮಾ ಸುದ್ದಿ

ನಟಿ ತಾಪ್ಸಿ ನನಗೆ ದೇಹದ ಈ ಭಾಗ ಇಷ್ಟ ಅಂದ್ರೂ, ಅದನ್ನು ತಿಳಿಯಲು ಗೂಗಲ್‌ಗೆ ಮುಗಿ ಬಿದ್ದ ಜನ!

Vishwanath S
ಮುಂಬೈ: ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಬಹುಭಾಷಾ ನಟಿ ತಾಪ್ಸಿ ಪನ್ನು ಅವರಿಗೆ ವ್ಯಕ್ತಿಯೋರ್ವ 'ನಿನ್ನ ಬಾಡಿ ಪಾರ್ಟ್ಸ್ ನಂಗಿಷ್ಟ' ಎಂದು ಹೇಳಿದ್ದಾನೆ. ಇದಕ್ಕೆ ತಾಪ್ಸಿ ಪನ್ನು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 
ತಮ್ಮನ್ನು ಟ್ರೋಲ್ ಮಾಡಿದವನಿಗೆ ತಿರುಗೇಟು ನೀಡುವ ವೇಳೆ ನಟಿ ತಾಪ್ಸಿ ಪನ್ನು 'ವಾವ್ ಐ ಲೈಕ್ ದೆಮ್ ಟೂ', ನಿಮ್ಮ ಇಷ್ಟದ ಭಾಗ ಯಾವುದು? ನನಗೆ Cerebrum ಇಷ್ಟ ಎಂದು ರೀ ಟ್ವೀಟ್ ಮಾಡಿದ್ದಾರೆ. 
ತಮ್ಮ ಟ್ರೋಲ್ ಮಾಡಿದವನಿಗೆ ತಾಪ್ಸಿ ಕೊಟ್ಟ ಖಡಕ್ ಉತ್ತರವನ್ನು ಕಂಡು ಹಲವು ಮಂದಿ ಶಾಕ್ ಆಗಿದ್ದಾರೆ. ಅಲ್ಲದೆ ಕೆಲವರು ಸೆರೆಬ್ರಮ್ ಎಂಬ ಪದದಅರ್ಥ ತಿಳಿಯದೇ ಗೂಗಲ್ ಮಾಡಿದ್ದಾರೆ. ಸೋಮವಾರ ಭಾರತೀಯರು ಗೂಗಲ್ ನಲ್ಲಿ ಹೆಚ್ಚು ಹುಡುಕಾಟ ನಡೆಸಿದ ಪದಗಳ ಪಟ್ಟಿಯಲ್ಲಿ ಸೆರೆಬ್ರಮ್ ಕೂಡ ಸ್ಥಾನ ಪಡೆದಿದೆ. 
ರಾಹುಲ್ ಎಂಬಾತ ಗೂಗಲ್ ಸರ್ಚ್ ನಲ್ಲಿ ಸೆರೆಬ್ರಮ್ ಪದದ ಹುಡುಕಾಟ ನಡೆಸಿದ ವೇಳೆ ಉಂಟಾಗಿರುವ ಬದಲಾವಣೆಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಹೆಚ್ಚಿನ ಜನ ಈ ಪದದ ಅರ್ಥ ತಿಳಿಯಲು ಪ್ರಯತ್ನಿಸಿದ್ದಾರೆ. 
ಇನ್ನು ಸೆರೆಬ್ರಮ್ ಅಂದರೆ ಮೆದುಳಿನ ಅತ್ಯಂತ ಪ್ರಮುಖ ಭಾಗವಾಗಿದೆ. ಇದನ್ನು ಕನ್ನಡದಲ್ಲಿ ಮುಮ್ಮಿದುಳು, ಪ್ರಧಾನ ಮೆದುಳು ಎಂದು ಕರೆಯುತ್ತಾರೆ.
SCROLL FOR NEXT