ಬೆಂಗಳೂರು: ದರ್ಶನ್ ಮತ್ತು ತರುಣ್ ಕಿಶೋರ್ ಕಾಂಬಿನೇಶನ್‌ನ 53ನೇ ಚಿತ್ರಕ್ಕೆ ರಾಬರ್ಟ್ ಎಂಬ ಟೈಟಲ್ ಫೈನಲ್ ಆಗಿದೆ, ಈ ಟೈಟಲ್‌ನ್ನು ಕ್ರಿಸ್‌ಮಸ್ ಹಬ್ಬದ ದಿನ ಬಿಡುಗಡೆ ಮಾಡಿದೆ.
ದರ್ಶನ್ ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ದರ್ಶನ್ ಹನುಮಂತನ ಅವತಾರದಲ್ಲಿದ್ದು ಹೆಗಲ ಮೇಲೆ ರಾಮನನ್ನು ಕೂರಿಸಿಕೊಂಡಿದ್ದಾರೆ. ಈ ಪೋಸ್ಟರ್‌ನಿಂದ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿರುವ ನಿರ್ದೇಶಕರು, ರಾಬರ್ಟ್ ಟೈಟಲ್‌ಗೂ ಈ ಪೋಸ್ಟರ್ ಗೂ ಯಾವುದೇ ಸಂಬಂಧವಿಲ್ಲ.
ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಪೋಸ್ಟರ್ ನ ಹಿಂದೆ ರಾವಣನ ಚಿತ್ರವಿದ್ದು, ಪೋಸ್ಟರ್ ಕೆಳಗೆ ಹೀಗೆ ಬರೆದಿದೆ ' ಈ ಕೈಗೆ...ಶಬರಿ ಮುಂದೆ ಸೋಲೋದು ಗೊತ್ತು, ರಾವಣನ ವಿರುದ್ಧ ಗೆಲ್ಲೋದು ಗೊತ್ತು, ಎಂದು ಬರೆದಿದೆ.
ರಾಬರ್ಟ್ ಎಮೋಷನಲ್ ಆ್ಯಕ್ಷನ್ ಸಿನಿಮಾ, ಈ ಚಿತ್ರದಲ್ಲಿ ದರ್ಶನ್ ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಒಂದು ಗೆಟಪ್ ಈಗ ಪೋಸ್ಟರ್‌ಗಳ ರೂಪದಲ್ಲಿ ಅಭಿಮಾನಿಗಳ ಮುಂದಿದೆ. ರಾಮ ಮತ್ತು ಹನುಮ ಇದ್ದ ಕಾರಣಕ್ಕೆ ಇದು ಪೌರಾಣಿಕ ಚಿತ್ರವಲ್ಲ. ಈ ಪೋಸ್ಟರ್ ಸಿನಿಮಾದ ಒಂದು ಸನ್ನಿವೇಶದಲ್ಲಿ ಬರುತ್ತದೆ. ಹಾಗಾಗಿ ಇದನ್ನೇ ಮೊದಲು ರಿಲೀಸ್ ಮಾಡಿದ್ದೇವೆ ಎಂದು ನಿರ್ದೇಶಕರು ಹೇಳಿದ್ದಾರೆ.
ಜನ ಟೈಟಲ್ ಮತ್ತು ಪೋಸ್ಟರ್ ಅನ್ನು ಅರ್ಥ ಮಾಡಿಕೊಳ್ಳುತ್ತಾರೆ, ಇದೊಂದು ಕೌಟುಂಬಿಕ ಮನರಂಜಾ ಚಿತ್ರವಾಗಿದೆ,ಇದರಲ್ಲಿ ಯಾವುದೇ ಧಾರ್ಮಿಕ ಸಂಘರ್ಷಗಳಿಲ್ಲ, ನಾನು ಬೆಳೆಯುತ್ತಾ ರಾಮನ ಬಗ್ಗೆ ಕೇಳಿದ್ದೆ, ರಾಮ, ರಹೀಮ್ ಮತ್ತು ರಾಬರ್ಟ್ ಎಲ್ಲಾ ಒಂದೇ, ಇದರಲ್ಲಿ ದರ್ಶನ್ ಕೇವಲ ಹನುಮಾನ್ ಬಟ್ಟೆ ಧರಿಸಿದ್ದಾರೆ, ಅದರ ಅರ್ಧ ಅವರು ಹನುಮಾನ್ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಅಲ್ಲ ಎಂದು ಹೇಳಿದ್ದಾರೆ.
ರಾಬರ್ಟ್ ಸಿನಿಮಾದ ಫರ್ಸ್ಚ್ ಲುಕ್ ಫೆಬ್ರವರಿ 16 ಅಂದರೆ ದರ್ಶನ್ ಹುಟ್ಟುಹಬ್ಬದಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ಸಿಕ್ಸ್ ಪ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics