ರಿಷಬ್ ಶೆಟ್ಟಿ-ಹರಿಪ್ರಿಯಾ 
ಸಿನಿಮಾ ಸುದ್ದಿ

'ಬೆಲ್ ಬಾಟಮ್' ತಮಿಳು ರಿಮೇಕ್ ಹಕ್ಕು ಮಾರಾಟ

ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಬೆಲ್ ಬಾಟಮ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಜಯತೀರ್ಥ ...

ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಬೆಲ್ ಬಾಟಮ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಜಯತೀರ್ಥ ನಿರ್ದೇಶನದ ಈ ಸಿನಿಮಾ ತೆರೆಗೆ ಬರುವುದಕ್ಕೆ ಮುನ್ನವೇ ತಮಿಳು ಭಾಷೆಗೆ ಮಾರಾಟವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಏತಕ್ಕೆ ಬೊಗಸೆ ತುಂಬಾ ಹಾಡು ವೈರಲ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತವಿರುವ ಹಾಡಿಗೆ ಸಾಹಿತ್ಯ ಬರೆದಿದ್ದು ಯೋಗರಾಜ್ ಭಟ್. ವಿಜಯ್ ಪ್ರಕಾಶ್ ಹಾಡಿದ್ದಾರೆ.

ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ಕಳೆದ ವಾರ ಚೆನ್ನೈಯಲ್ಲಿ ಚಿತ್ರದ ತಮಿಳು ರಿಮೇಕ್ ಬಗ್ಗೆ ಮಾತುಕತೆ ನಡೆಸಲು ಹೋಗಿದ್ದರು.

ಈ ಬಗ್ಗೆ ಸ್ವತಃ ಜಯತೀರ್ಥ ಅವರೇ ಸದ್ಯದಲ್ಲಿ ಅಧಿಕೃತವಾಗಿ ತಿಳಿಸಲಿದ್ದಾರೆ. ಈ ಮಧ್ಯೆ ಚಿತ್ರ ಬಿಡುಗಡೆ ದಿನಾಂಕ ಕೂಡ ನಿರ್ಧಾರವಾಗಲಿದೆ. ಗೋಲ್ಡನ್ ಹಾರ್ಸ್ ನಡಿ ತಯಾರಾಗುತ್ತಿರುವ ಸಿನಿಮಾದಲ್ಲಿ ಅರವಿಂದ್ ಕಶ್ಯಪ್ ಕ್ಯಾಮರಾವಿದ್ದು, ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಸಂಜಯ್ ಶಾಸ್ತ್ರಿ, ಶಿವಮಣಿ, ಪಿಡಿ ಸತೀಶ್, ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kogilu layout Demolition: ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡಲಾಗುವುದು; ಸಿಎಂ ಸಿದ್ದರಾಮಯ್ಯ

ರಾಜ್ಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ತಿಮ್ಮಪ್ಪನ ದರ್ಶನಕ್ಕೆ ದೇವಸ್ಥಾನಗಳಲ್ಲಿ ಭಕ್ತ ಸಾಗರ; ಹಲವೆಡೆ ವಾಹನ ಸಂಚಾರ ನಿರ್ಬಂಧ

ಕ್ಷಮಿಸುಬಿಡು ಅಮ್ಮಾ...: ನಟಿ ನಂದಿನಿ ಆತ್ಮಹತ್ಯೆ; ಡೆತ್‌ ನೋಟ್‌ ಸೀಕ್ರೆಟ್‌ ಬಹಿರಂಗ!

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಖಲೀದಾ ಜಿಯಾ ನಿಧನ

ನಮಗೆ ಶಕ್ತಿ ಇಲ್ಲ ಅದಕ್ಕೆ NDA ಜತೆ ಹೋಗಿದ್ದೀವಿ. ನೀವ್ಯಾಕೆ ಸ್ಟಾಲಿನ್‌ ಮನೆ ಬಾಗಿಲು ಬಡಿತೀರಾ?

SCROLL FOR NEXT