ಸಿನಿಮಾ ಸುದ್ದಿ

2018: ಪ್ರಚಾರದಲ್ಲೇ ಸಿನಿಮಾದ ಯಶಸ್ಸು ಅಡಗಿದೆ ಎಂಬುದನ್ನು ಕಂಡುಕೊಂಡ ಸ್ಯಾಂಡಲ್‏ವುಡ್

Nagaraja AB
ಸರ್ಕಾರ ಫ್ಲೆಕ್ಸ್ ಮತ್ತು ಪೋಸ್ಟರ್ ಗಳನ್ನು ನಿರ್ಬಂಧಿಸಿದ ನಂತರ ಸ್ಯಾಂಡಲ್ ವುಡ್ ಚಿತ್ರಗಳ ಪ್ರಚಾರ ಕಾರ್ಯ ಕಡಿಮೆಯಾಗಿದೆ.ಇದರಿಂದಾಗಿ  ಕನ್ನಡ ಚಿತ್ರರಂಗ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಪ್ರಚಾರದ ಸಾದನಗಳನ್ನಾಗಿ ಬಳಸಿಕೊಳ್ಳುತ್ತಿದೆ.
ಗುಲ್ಟು ಹಾಗೂ ಕೆಜಿಎಫ್ ಚಿತ್ರತಂಡ ಟ್ವಿಟರ್, ಫೇಸ್ ಬುಕ್, ಮತ್ತು ಇಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳ  ಮೂಲಕವೇ  ತಮ್ಮ ಚಿತ್ರಗಳ ಬಗ್ಗೆ ಅಬ್ಬರದ ಪ್ರಚಾರ ನಡೆಸಿದರು. ಯಶಸ್ವಿಯೂ ಆದರು.
ಜನರಿಗಾಗಿ ಚಿತ್ರ ಮಾಡಲಾಗುತ್ತದೆ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಪ್ರಾಮಾಣಿಕವಾಗಿ ಅವರನ್ನು ಒಪ್ಪಿಸುವುದೇ  ಚಿತ್ರದ ಪ್ರಚಾರಕ್ಕೆ ಉತ್ತಮ ಮಾರ್ಗ ಎನ್ನುತ್ತಾರೆ ನಿರ್ದೇಶಕ ಸೂರಿ.
ನಿರ್ದೇಶಕ ರಿಷಬ್ ಶೆಟ್ಟಿ ಪ್ರಕಾರ, ಕಥೆಯ ಆಯ್ಕೆ ಸಿನಿಮಾವೊಂದರ ಯಶಸ್ಸಿಗೆ ಅತ್ಯವಶ್ಯಕ. ಚಿತ್ರದ ಶೀರ್ಷಿಕೆ ತಮ್ಮಗೆ ಹತ್ತಿರ ಎಂಬಂತಿದ್ದರೆ ವೀಕ್ಷಕರು ಚಿತ್ರ ನೋಡುತ್ತಾರೆ.  ಹತ್ತು ವರ್ಷಗಳ ಹಿಂದೆ  ಮುದ್ರಣ ಮಾದ್ಯಮದಲ್ಲಿ ಜಾಹಿರಾತು ನೀಡುವ ಮೂಲಕ ಸಿನಿಮಾ ಪ್ರಚಾರ ನಡೆಸಲಾಗುತಿತ್ತು. ಆದಾಗ್ಯೂ, ಈಗ ಬದಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪ್ರಚಾರಕರಾಗಿದ್ದಾರೆ ಎನ್ನುತ್ತಾರೆ.
SCROLL FOR NEXT