ಪುತ್ರನೊಂದಿಗೆ ಸಂಭಾಷಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ
ತಮ್ಮ ಬಿರುಸಿನ ರಾಜಕೀಯ ಕೆಲಸದ ನಡುವೆ ಪುತ್ರ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರೀಕರಣ ಸೆಟ್ ಗೆ ಇತ್ತೀಚೆಗೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದ್ದರು.
ಎ.ಹರ್ಷ ನಿರ್ದೇಶನದ ಚಿತ್ರವಿದು. ಈ ಹಿಂದೆ ಸಿನಿಮಾ ವಿತರಕರಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರ ಹೋಂ ಬ್ಯಾನರ್ ಆದ ಚೆನ್ನಾಂಬಿಕಾ ಪ್ರೊಡಕ್ಷನ್ ನಡಿ ತಯಾರಾಗುತ್ತಿರುವ ಚಿತ್ರ ಸೀತಾರಾಮ ಕಲ್ಯಾಣ.
ಚಿತ್ರೀಕರಣ ತಂಡಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ತಮ್ಮ ಪುತ್ರ ಹಾಗೂ ಚಿತ್ರತಂಡದವರ ಜೊತೆ ಮಾತುಕತೆ ನಡೆಸಿ ಕೆಲ ಸಮಯಗಳನ್ನು ಕಳೆದರು.
ಈಗಾಗಲೇ 10 ದಿನಗಳ ಶೂಟಿಂಗ್ ನ್ನು ಕುಮಾರಸ್ವಾಮಿಯವರು ವೀಕ್ಷಿಸಿದರು. ತಮ್ಮ ಪುತ್ರ ಆಯ್ಕೆ ಮಾಡಿಕೊಂಡಿರುವ ಚಿತ್ರಕಥೆ ಬಗ್ಗೆ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನುತ್ತಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ.
ಜಾಗ್ವಾರ್ ಚಿತ್ರದ ಅಭಿನಯದಿಂದ ಆರಂಭಿಸಿದ ನಿಖಿಲ್ ಕುಮಾರ್ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರವನ್ನು ಮತ್ತು ಇದೀಗ ಮೂರನೆಯದಾಗಿ ಸೀತಾರಾಮ ಕಲ್ಯಾಣದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರದ ಶೂಟಿಂಗ್ ಗೆ ಅತ್ಯುಂತ ಸುಧಾರಿತ ಕ್ಯಾಮರವಾದ ಅಲೆಕ್ಸಾ-ಎಸ್ಎಕ್ಸ್ ಟಿಡಬ್ಲ್ಯುವನ್ನು ಬಳಸುತ್ತಿದ್ದೇವೆ ಎಂದರು ಸುನಿಲ್.
ನಿಖಿಲ್ ಜೊತೆ ಚಿತ್ರದಲ್ಲಿ ರಚಿತಾ ರಾಮ್, ಚಿಕ್ಕಣ್ಣ, ಶರತ್ ಕುಮಾರ್ ಅಭಿನಯಿಸುತ್ತಿದ್ದಾರೆ. ರವಿ ಬಸ್ರೂರು ಅವರ ಸಂಗೀತ ಮತ್ತು ಸ್ವಾಮಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics