ಪ್ರೇಮ ಬರಹ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಕಠಿಣ ಪರಿಶ್ರಮದ ಫಲ ಪ್ರೇಮ ಬರಹ: ಐಶ್ವರ್ಯಾ ಸರ್ಜಾ

ಅರ್ಜುನ್ ಸರ್ಜಾ ನಿರ್ದೇಶನದ ಐಶ್ವರ್ಯಾ ಸರ್ಜಾ ಮತ್ತು ಚಂದನ್ ಅಭಿನಯದ ಪ್ರೇಮ ಬರಹ ಚಿತ್ರ ನಾಳೆ ತೆರೆಗೆ ....

ಅರ್ಜುನ್ ಸರ್ಜಾ ನಿರ್ದೇಶನದ ಐಶ್ವರ್ಯಾ ಸರ್ಜಾ ಮತ್ತು ಚಂದನ್ ಅಭಿನಯದ ಪ್ರೇಮ ಬರಹ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆ ನಾಯಕ-ನಾಯಕಿ ಮಾತನಾಡಿದ್ದಾರೆ.
ಕನ್ನಡದಲ್ಲಿ ಪ್ರೇಮ ಬರಹ ಮತ್ತು ತಮಿಳಿನಲ್ಲಿ ಸೊಲ್ಲವಿದವ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. 
ಸಿನಿಮಾ ಬಿಡುಗಡೆಯಾಗುತ್ತಿರುವ ಸಮಯದಲ್ಲಿ ಭಯ, ಆತಂಕಗಳಾಗಲಿ ಇಲ್ಲ, ಆದರೆ ನನಗೆ ಏನನ್ನಿಸುತ್ತಿದೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಕಾತರಳಾಗಿದ್ದೇನೆ ಎನ್ನುತ್ತಾರೆ ಐಶ್ವರ್ಯಾ.
ತಮಿಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಯಾರಿಸುವಾಗ ತುಂಬಾ ಕಷ್ಟವಾಗಿತ್ತು. ಆದರೆ ಎರಡೂ ರಾಜ್ಯಗಳ ಜನತೆ ಚಿತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಐಶ್ವರ್ಯಾಗಿದೆಯಂತೆ. ತಮ್ಮ ತಂದೆ ತಮಗಾಗಿ ಈ ಚಿತ್ರ ನಿರ್ಮಾಣ ಮಾಡಿ ನಿರ್ದೇಶಿಸಿರುವುದರಿಂದ ತಂದೆಯಿಂದ ಸಿಕ್ಕಿದ ಅತಿದೊಡ್ಡ ಉಡುಗೊರೆ ಎಂದು ಭಾವಿಸುತ್ತೇನೆ ಎನ್ನುತ್ತಾರೆ.
ನನ್ನ ತಂದೆಯವರ ಚಿತ್ರಗಳನ್ನು ನೋಡಿಕೊಂಡು ಬೆಳೆದವಳು ನಾನು. ಇಂದು ಅವರ ನಿರ್ದೇಶನದಡಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದು ಎರಡು ವರ್ಷಗಳ ಕಠಿಣ ಶ್ರಮದ ಫಲ ಎನ್ನುತ್ತಾರೆ ಐಶ್ವರ್ಯಾ.
ಈ ಚಿತ್ರದ ಮೂಲಕ ನಟ ಚಂದನ್ ಕಿರುತೆರೆಯಿಂದ ಹಿರಿತೆರೆಗೆ ಬಡ್ತಿ ಪಡೆದಿದ್ದಾರೆ. 2017ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಜನಪ್ರಿಯತೆಯಲ್ಲಿದ್ದಾಗ ಪ್ರೇಮ ಬರಹ ಚಿತ್ರಕ್ಕೆ ನಾಯಕನಾಗಿ ನಟಿಸುವ ಆಫರ್ ಬಂದಂತೆ. 
ಇದು ಇಷ್ಟು ವರ್ಷಗಳ ನನ್ನ ಪ್ರಯತ್ನಕ್ಕೆ ಸಿಕ್ಕಿದ ಫಲವಾಗಿದೆ. ಅರ್ಜುನ್ ಸರ್ಜಾ ಅವರು ತಮ್ಮ ಜೀವನದ ಅನುಭವಗಳನ್ನು ಇಲ್ಲಿ ಧಾರೆಯೆರೆದಿದ್ದಾರೆ. ತಮಿಳಿನಲ್ಲಿ ನಟಿಸಲು ನನಗೆ ತಮಿಳು ಭಾಷೆಯ ತರಬೇತಿಯನ್ನು ಕೂಡ ಅರ್ಜುನ್ ಸರ್ಜಾ ಒದಗಿಸಿದರು ಎನ್ನುತ್ತಾರೆ ಚಂದನ್. ಈ ಚಿತ್ರದಲ್ಲಿ ಜನರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಸಿನಿಮಾಗಳನ್ನು ಒಪ್ಪಿಕೊಳ್ಳಲು ಚಂದನ್ ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT