ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಪ್ರೋಮೋ ಸಾಂಗ್ ಮೂಲಕ ಶ್ರೇಯಸ್ ಮಂಜು ಪರಿಚಯ

ಪಡ್ಡೆ ಹುಲಿ ಚಿತ್ರದ ಮೂಲಕ ಶ್ರೇಯಸ್ ಮಂಜು ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಪ್ರೋಮೋ ಸಾಂಗ್ ಮೂಲಕ ಶ್ರೇಯಸ್ ಮಂಜು ಅವರನ್ನು ಪರಿಚಯಿಸಲು...

ಪಡ್ಡೆ ಹುಲಿ ಚಿತ್ರದ ಮೂಲಕ ಶ್ರೇಯಸ್ ಮಂಜು ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಪ್ರೋಮೋ ಸಾಂಗ್ ಮೂಲಕ ಶ್ರೇಯಸ್ ಮಂಜು ಅವರನ್ನು ಪರಿಚಯಿಸಲು ನಿರ್ದೇಶಕ ಗುರು ದೇಶಪಾಂಡೆ ನಿರ್ಧರಿಸಿದ್ದಾರೆ. 
ಪಡ್ಡೆ ಹುಲಿ ಚಿತ್ರ ಮಾರ್ಚ್ ನಲ್ಲಿ ಸೆಟ್ಟೇರಲಿದ್ದು ಹೊಸ ಪ್ರತಿಭೆಯ ಪರಿಚಯಕ್ಕಾಗಿ ನಿರ್ದೇಶಕರು ಪ್ರೋಮೋ ಸಾಂಗ್ ವೊಂದನ್ನು ಚಿತ್ರೀಕರಿಸಲಿದ್ದಾರೆ. ಫೆಬ್ರವರಿ 22ರಂದು ಮಿನರ್ವ ಮಿಲ್ಸ್ ನಲ್ಲಿ ಚಿತ್ರೀಕರಣ ನಡೆಯಲಿದ್ದು ಇದಕ್ಕಾಗಿ ಬೃಹತ್ ಸೆಟ್ ರೆಡಿಯಾಗಿದೆ. 
ಸ್ಯಾಂಡಲ್ವುಡ್ ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಮಂಜು ಅವರು ಪಡ್ಡೆ ಹುಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರಕ್ಕಾಗಿ ಭಾರೀ ಕಸರತ್ತು ಶುರು ಮಾಡಿರುವ ಶ್ರೇಯಸ್ ನಟನೆ, ನೃತ್ಯ ಮತ್ತು ಸಾಹಸ ಪ್ರಧಾನ ದೃಶ್ಯಗಳನ್ನು ಪ್ರೋಮೋ ಸಾಂಗ್ ನಲ್ಲಿ ಚಿತ್ರೀಕರಿಸಲಾಗುತ್ತದೆ. 
ಪಡ್ಡೆ ಹುಲಿ ಚಿತ್ರದ ಮೂಹೂರ್ತ ಫೆಬ್ರವರಿ 28 ಅಥವಾ ಮಾರ್ಚ್ ಮೊದಲ ವಾರದಲ್ಲಿ ನಡೆಸಲು ಚಿತ್ರತಂಡ ತೀರ್ಮಾನಿಸಿದ್ದು ಅಂದೇ ಪ್ರೋಮೋ ಸಾಂಗ್ ಬಿಡುಗಡೆಯಾಗುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಟಿಕೆಟ್‌: ಡಿಕೆ ಶಿವಕುಮಾರ್ ಘೋಷಣೆ

ಅನಂತ್‌ನಾಗ್‌: ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆ!

ಬೆಂಗಳೂರು: CJI ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಎಫ್ಐಆರ್ ದಾಖಲು

ಸ್ವದೇಶಿ ಮಂತ್ರ: Gmailನಿಂದ Zoho Mailಗೆ ಅಮಿತ್ ಶಾ ಶಿಫ್ಟ್; ಟ್ರಂಪ್‌ಗೆ ಠಕ್ಕರ್

ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)

SCROLL FOR NEXT