ನಟಿ ಶ್ರೀದೇವಿ 
ಸಿನಿಮಾ ಸುದ್ದಿ

ಶ್ರೀದೇವಿ ನಿಧನಕ್ಕೆ ಗಣ್ಯರ ಸಂತಾಪ: ಮುಂಬಯಿ ನಿವಾಸಕ್ಕೆ ಬಿಗಿ ಭದ್ರತೆ

ಹಿರಿಯ ನಟಿ ಶ್ರೀದೇವಿ ನಿಧನಕ್ಕೆ ಬಾಲಿವುಡ್ ಗಣ್ಯರು ಆಘಾತ ವ್ಯಕ್ತ ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ....

ಮುಂಬಯಿ:  ಹಿರಿಯ ನಟಿ ಶ್ರೀದೇವಿ ನಿಧನಕ್ಕೆ ಬಾಲಿವುಡ್ ಗಣ್ಯರು ಆಘಾತ ವ್ಯಕ್ತ ಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
1963 ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಶ್ರೀದೇವಿ ತಮ್ಮ 4ನೇ ವಯಸ್ಸಿನಲ್ಲಿಯೇ ತುನೈವನ್ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. 
ಅದಾದ ನಂತರ ಹಿಂತಿರುಗಿ ನೋಡದ ಶ್ರೀದೇವಿ ದೇಶದ ಪ್ರಮುಖ ನಾಯಕಿಯರುಗಳಲ್ಲಿ ಒಬ್ಬರಾದರು. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಸುಮಾರು 200 ಚಿತ್ರಗಳಲ್ಲಿ ಶ್ರೀದೇವಿ ನಟಿಸಿದ್ದಾರೆ. 
ಬಾಲಿವುಡ್ ನ ಪ್ರಸಿದ್ದ ಸಿನಿಮಾಗಳಾದ ಚಾಂದನಿ, ಲಮ್ಹೆ, ಮಿ. ಇಂಡಿಯಾ, ಚಾಲಾ ಬಾಜ್, ನಾಗಿನ, ಸದ್ಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ದರಾಗಿದ್ದರು. 
2017ರಲ್ಲಿ ಬಿಡುಗಡೆಯಾದ ಮಾಮ್ ಶ್ರೀದೇವಿ ಅವರ ಕೊನೆಯ ಸಿನಿಮಾವಾಗಿದೆ. ಶ್ರೀದೇವಿ ಹಿರಿಯ ಪುತ್ರಿ ಜಾಹ್ನವಿ ಈ ವರ್ಷ ಕರಣ್ ಜೋಹರ್ ನಿರ್ದೇಶನದ ದಡಕ್ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT