ಬೆಂಗಳೂರು: ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಪಡೆಯುತ್ತಿದ್ದಾರೆ.
ಸುದೀಪ್ ಅಭಿನಯದ ರನ್ನ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಡಿದ್ದರು. ಈಗ ವಿಲನ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶರತ್ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ವಿಕ್ರಮ್ ಆಸ್ಪತ್ರೆಗಾಗಿ 2 ಶಾರ್ಟ್ ಫಿಲಂ ಮಾಡುತ್ತಿದ್ದ ವಿನಯ್ ಭಾರದ್ವಾಜ್ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಕನ್ನಡಿಗನಾಗಿರುವ ವಿನಯ್ 14 ವರ್ಷ ಸಿಂಗಾಪೂರ್ ನಲ್ಲಿ ನೆಲೆಸಿದ್ದರು.ಚಿತ್ರದಲ್ಲಿ ಹಿತ ಚಂದ್ರಶೇಖರ್ ನಾಯಕಿಯಾಗಿ ನಟಿಸುತ್ತಿದ್ದಾಳೆ, 12 ನೇ ಶತಮಾನದ ಅಕ್ಕ ಮಹಾದೇವಿಯ ರಚನೆಯ ಕನಸ ಕಂಡೆ ವಚನವನ್ನು ಸಮಕಾಲೀನ ಶೈಲಿಗೆ ಹೊಂದಿಸಿದ ವಿಡಿಯೋ ಬಿಡುಗಡೆ ಮಾಡಲಾಗಿದೆ.
90 ರ ದಶಕದಲ್ಲಿ ಕನ್ನಡದ ಜನಪ್ರಿಯ ಭಾವಗೀತೆಗಳನ್ನು ಫಿಕ್ಚರೈಸ್ ಮಾಡುವ ಟ್ರೆಂಡ್ ರೂಢಿಯಲ್ಲಿತ್ತು. ಅದೇ ರೀತಿ ಅಕ್ಕನ ವಚನಗಳ ಕನಸ ಕಂಡೆ ವಿಡಜಿಯೋ ಹಾಡು ರಿಲೀಸ್ ಆಗಿದೆ, ಈ ಹಾಡಿನಲ್ಲಿ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಹಾಗೂ ಸಿಹಿಕಹಿ ಚಂದ್ರು ಪುತ್ರಿ ಹಿತ ನಟಿಸಿದ್ದಾರೆ, ಇಂಚರ ರಾವ್ ಹಿನ್ನೆಲೆಯ ಗಾಯನ ನೀಡಿದ್ದಾರೆ.
ಸಿಂಗಾಪುರ ದಲ್ಲಿ ನೆಲೆಸಿರುವ ವಿನಯ್ ಮಾರ್ಚ್ 20 ಕ್ಕೆ ಬೆಂಗಳೂರಿಗೆ ಬರಲಿದ್ದು ಅ ನಂತರ ಸಿನಿಮಾಗೆ ಸಂಬಂಧಿತ ಕೆಲಸ ನಿರ್ವಹಿಸಲಿದ್ದಾರೆ,