ಕಳೆದ ವಾರ ಬಿಡುಗಡೆಯಾದ ಸುನಿ ನಿರ್ದೇಶನದ ಗಣೇಶ್-ರಶ್ಮಿಕಾ ಅಭಿನಯದ ಚಮಕ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಚೆನ್ನಾಗಿ ಗಳಿಕೆ ಮಾಡುತ್ತಿರುವುದು ತಿಳಿದಿದೆ.
ಚಿತ್ರದ ವಿತರಕರಿಂದ ಸಿಕ್ಕಿರುವ ಇತ್ತೀಚಿನ ಲೆಕ್ಕ ಪ್ರಕಾರ ನಿನ್ನೆಯವರೆಗೆ ಚಮಕ್ ಚಿತ್ರ ಪ್ರದರ್ಶನದಿಂದ 10.42 ಕೋಟಿ ರೂಪಾಯಿ ಸಂಪಾದನೆಯಾಗಿದ್ದು ಅದರಲ್ಲಿ ಚಿತ್ರ ನಿರ್ಮಾಪಕರಿಗೆ 6.23 ಕೋಟಿ ರೂಪಾಯಿ ಹೋಗಿದೆ.
ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಲಾಭ ತರುವ ನಿರೀಕ್ಷೆಯಿದೆ.
ಈ ಮಧ್ಯೆ ಚಮಕ್, ವಿಶ್ವಾದ್ಯಂತ ಪ್ರದರ್ಶನ ಕಾಣಲಿದೆ. ಕಸ್ತೂರಿ ಮೀಡಿಯಾ ಸಾಗರೋತ್ತರ ಪ್ರದರ್ಶನದ ಹಕ್ಕು ಪಡೆದುಕೊಂಡಿದ್ದು ಅಮೆರಿಕಾ ಮತ್ತು ಕೆನಡಾಗಳಲ್ಲಿ 32 ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ವಿತರಕ ನಾಗರಾಜ್ ಬೆತೂರ್ ಲಂಡನ್, ಯುರೋಪ್ ಮತ್ತು ದುಬೈಗಳಲ್ಲಿ ಚಿತ್ರವನ್ನು ಜನವರಿ 12ರಂದು ಬಿಡುಗಡೆ ಮಾಡಲಿದ್ದಾರೆ. ನಂತರ ಸಿಂಗಾಪುರ, ಮಲೇಷಿಯಾ, ದಕ್ಷಿಣ ಆಫ್ರಿಕಾ ಮತತ್ು ಕೆನ್ಯಾಗಳಲ್ಲಿ ಜನವರಿ 18ರಂದು ಬಿಡುಗಡೆಯಾಗಲಿದೆ.
ಜುಡ್ಹಾ ಸ್ಯಾಂಡಿಯವರ ಸಂಗೀತ, ಸಂತೋಷ್ ರೈ ಪಾತಾಜೆಯವರ ಛಾಯಾಗ್ರಹಣ ಚಮಕ್ ಚಿತ್ರಕ್ಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos