ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್ ಚಿತ್ರದಲ್ಲಿ ದಾನೀಶ್‌ ಸೇಠ್ 
ಸಿನಿಮಾ ಸುದ್ದಿ

ರಾಜಕಾರಣದ ಹೊರತಾಗಿಯೂ 'ಬದಲಾವಣೆಯನ್ನು' ತರಲು ಸಾಧ್ಯ: ದಾನೀಶ್‌ ಸೇಠ್‌

ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ತಂಡದಿಂದ ಇನ್ನೊಂದು ವಿಭಿನ್ನ ಚಿತ್ರ ಮೂಡಿಬರುತ್ತಿದ್ದು ಆ ಚಿತ್ರವೇ 'ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌'.

ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ತಂಡದಿಂದ ಇನ್ನೊಂದು ವಿಭಿನ್ನ ಚಿತ್ರ ಮೂಡಿಬರುತ್ತಿದ್ದು ಆ ಚಿತ್ರವೇ 'ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌'. ದಾನೀಶ್‌ ಸೇಠ್‌ ಮುಖ್ಯ ಭೂಮಿಕೆಯಯಲ್ಲಿರುವ ಈ ಚಿತ್ರದ ಬಗೆಗೆ ಅವರು ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ್ದಾರೆ.
"ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಕಾಲಕ್ಕೆ ತಕ್ಕಂತೆ ಬನಡೆಯಲು ಇಷ್ಟಪಡುತ್ತೇನೆ. ಈ ನಿಲುವೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ನಾವು ಎಷ್ಟು ಯಶಸ್ಸು ಸಾಧಿಸಿದ್ದೇವೆ ಎನ್ನುವುದು ಮುಖ್ಯವಲ್ಲ. ಆದರೆ ಬದುಕು ನೀವು ಅಂದುಕೊಂಡಿರದ ತೀರಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ." 
ರೇಡಿಯೋ ಜಾಕಿ ಮತ್ತು ಆಂಕರ್ ಆಗಿರುವ ದಾನೀಶ್‌ ಈ ಚಿತ್ರದಲ್ಲಿನ ಪಾತ್ರದ್ಫ ಬಗೆಗೆ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. "ನಾನು ಏನು ಮಾಡಬೇಕೆಂದು ಬಯಸಿದ್ದೇನೋ ಇದು ತುಂಬಾ ಮಟ್ಟಿಗೆ ಇದ್ಫರಲ್ಲಿದೆ. ನಾನು ಯಾವಾಗಲೂ ಸೃಜನಶೀಲನಾಗಿರಲು ಬಯಸುತ್ತೇನೆ ಮತ್ತು ಹಾಸ್ಯ ಮಾಡುತ್ತಿರುತ್ತೇನೆ. ನಾನು ನನ್ನ ಬಾಲ್ಯದಲ್ಲಿರುವಂತೆಯೇ ಇರಬಯಸುತ್ತೇನೆ.  ನಾನು ಶಾಲೆಯಲ್ಲಿ ಇದ್ದಾಗಲೇ ನಾಟಕಗಳಲಲಿ ಭಾಗವಹಿಸುತ್ತಿದ್ದೆ, ಮಿಮಿಕ್ರಿ ಮಾಡುತ್ತಿದ್ದೆ, ಈಗ ನಾನು ರೇಡಿಯೊದಲ್ಲಿ ಜಾಕಿಯಾಗಿದ್ದೇನೆ. ನಾನು ನನ್ನ ಶಾಲೆಯಲ್ಲಿದ್ದಾಗ ನಾಟಕಗಳನ್ನು ಬರೆಯುತ್ತಿದ್ದೆ. ಈಗಲೂ ಇರುವ ಒಂದೇ ವ್ಯತ್ಯಾಸ, ನಾನೇನು ಮಾಡುತ್ತೇನೋ ಅದಕ್ಕೆ ಹಣ ಪಡೆಯುತ್ತೇನೆ. ಇದು ಒಳ್ಳೆಯದು."
ದಾನೀಶ್‌ ಅವರ ಮೊದಲ ಚಿತ್ರ 'ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌' ಈ ವಾರ ತೆರೆ ಕಾಣುತ್ತಿದ್ದು ಚುನಾವಣೆ ವೇಳೆಯಲ್ಲಿ ಈ ಚಿತ್ರ ಬರುತ್ತಿರುವುದು ನಿಜಕ್ಕೂ ಕಾಕತಾಳೀಯ. ಈ ಚಿತ್ರ ನಿಮಗೆ ಯಾರಿಗೆ ಮತ ನೀಡಬೇಕೆಂದು ಹೇಳದೆ ಇದ್ದರೂ ಯಾರಿಗೆ ನೀಡಬಾರದು ಎನ್ನುವುದನ್ನು ಹೇಳುತ್ತದೆ. 
"ನೀವು ವ್ಯವಸ್ಥೆಯನ್ನು ಬದಲಿಸಬೇಕೆಂದರೆ, ನೀವು ರಾಜಕೀಯದಲ್ಲಿರಬೇಕು ಎಂದು ಬಹುತೇಕ ಜನ ತಪ್ಪಾಗಿ ಭಾವಿಸುತ್ತಾರೆ. ಆದರೆ ರಾಜಕಾರಣದ ಹೊರತಾಗಿಯೂ 'ಬದಲಾವಣೆಯನ್ನು' ತರಲು ಸಾಧ್ಯ ಎಂದು  ನಾನು ನಂಬಿದ್ದೇನೆ, ಈ ಚಿತ್ರ ಒಂದು ಅನನ್ಯ ವಿಡಂಬನಾತ್ಮಕ ಹಾಸ್ಯದ ಜತೆಗೆ ರಾಜಕೀಯ ವಿಡಂಬನೆಯ ಕಥೆಯಾಗಿದೆ. ,  ನಮ್ಮ ಚಿತ್ರವು ಕೆಟ್ಟ ಹಾಸ್ಯವನ್ನು ಹೊಂದಿರುವುದಿಲ್ಲ ಆದರೆ ಸನ್ನಿವೇಶಕ್ಕೆ ತಕ್ಕ ಹಾಸ್ಯವನ್ನು ಮಾತ್ರ ಹೊಂದಿರುತ್ತದೆ, 
"ಬರಹಗಾರನು ಬೇರೆಲ್ಲರಿಗಿಂತ ಹೆಚ್ಚು ಮುಖ್ಯವಾಗುತ್ತಾರೆ. ಸಹಜವಾಗಿ, ಅದು ನಿರ್ದೇಶಕರ ಮಾದರಿಯಾಗಿರುತ್ತದೆ. ನಾನು ಎಷ್ಟು ಸಮಯ ಆನ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎನ್ನುವುದು ಮುಖ್ಯವಲ್ಲ. ಒಟ್ಟಾರೆ ಚಿತ್ರ ನನಗೆ ತೃಪ್ತಿ ತಂದಿದೆ. ನಾನು ಕನ್ನಡವನ್ನು ಸ್ಪಷ್ಟವಾಗಿ ಓದಬಲ್ಲೆ, " ಅವರು ಸುಮಖಿ ಸುರೇಶ್ ಮತ್ತು ವಿಜಯ್ ಚೆಂಡೂರ್ ಅವರನ್ನು ಇತರ ನಟರ ಬಗೆಗೆ ಅಭಿಮಾನ ವ್ಯಕ್ತಪಡಿಸುತ್ತಾರೆ. "ಎಲ್ಲಕ್ಕಿಂತ ಹೆಚ್ಚಾಗಿ, ನಾವು ಪುಷ್ಕರ್ ಮಲ್ಲಿಕಾರ್ಜುನ್, ರಕ್ಷಿತ್ ಶೆಟ್ಟಿ, ಹೇಮಂತ್ ಎಂ.ರಾವ್ ಅವರಂತಹಾ ನಿರ್ಮಾಪಕರನ್ನು ಹೊಂದಿದ್ದೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT