ಸಿನಿಮಾ ಸುದ್ದಿ

ರಾಕ್ ಲೈನ್ ವೆಂಕಟೇಶ್ ಮುಂದಿನ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಾಯಕ

Sumana Upadhyaya
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಮಾತುಗಳು ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಅದನ್ನೀಗ ಸ್ವತಃ ರಾಕ್ ಲೈನ್ ಅವರೇ ದೃಢಪಡಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಹೌದು ನನ್ನ ಮುಂದಿನ ಚಿತ್ರ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಆಗಿದ್ದು, ಅದನ್ನು ಪವನ್ ಒಡೆಯರ್ ನಿರ್ದೇಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ನಿರ್ದೇಶಕರು ಹೇಳಿದ ಕಥೆ ಒಪ್ಪಿಗೆಯಾಗಿದ್ದು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸಿನಿಮಾ ಕೆಲಸ ಶುರುವಾಗಲಿದೆ ಎನ್ನುತ್ತಾರೆ ರಾಕ್ ಲೈನ್ ವೆಂಕಟೇಶ್. ಚಿತ್ರದ ಮುಹೂರ್ತ ದಿನ ನಿಗದಿಯಾದ ನಂತರ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ನಂತರ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ. 
2018ರಲ್ಲಿ ಪುನೀತ್ ಅವರು ನಿರ್ದೇಶಕರಾದ ಶಶಾಂಕ್ ಮತ್ತು ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ ಸಿನಿಮಾಗಳಲ್ಲಿ ಕೂಡ ನಟಿಸಲಿದ್ದಾರೆ.
SCROLL FOR NEXT