ಸಿನಿಮಾ ಪ್ರಚಾರ ಹಾಡುಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರುವುದು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಲೇಟೆಸ್ಟ್ ಟ್ರೆಂಡ್ ಆಗಿದೆ. ನಿರ್ದಿಷ್ಟ ಚಿತ್ರದ ವಿಶೇಷ ಹಾಡು ಇದಾಗಿದ್ದು, ಆ ಸಿನಿಮಾದಲ್ಲಿ ಈ ಹಾಡು ಇರುವುದಿಲ್ಲ. ಚಿತ್ರದ ಪ್ರಚಾರಕ್ಕೆಂದೇ ಮಾಡಲಾಗುವ ಹಾಡು ಪ್ರೊಮೊಷನಲ್ ಹಾಡು ಇದಾಗಿರುತ್ತದೆ. ವೀಕ್ಷಕರಿಗೆ ಸಿನಿಮಾದ ಬಗ್ಗೆ ಒಂದು ಐಡಿಯಾವನ್ನು ನೀಡುತ್ತದೆ.
ಅಂತವುಗಳಲ್ಲೊಂದು ಮುಂದಿನ ದಿನಗಳಲ್ಲಿ ತೆರೆ ಕಾಣಲಿರುವ ಬಕಾಸುರ ಚಿತ್ರದ ಹಾಡು. ಇದರ ಪ್ರಚಾರಕ್ಕಾಗಿ ಹಾಡೊಂದನ್ನು ತಯಾರಿಸಲಾಗಿದ್ದು ಅದನ್ನು ಫ್ರೆಂಡ್ ಶಿಪ್ ಸಾಂಗ್ ಅಥವಾ ಸ್ನೇಹಿತರ ಹಾಡು ಎಂದು ಶೀರ್ಷಿಕೆ ಇಡಲಾಗಿದೆ. ಕನ್ನಡ ಸಿನಿಮಾದ 60ಕ್ಕೂ ಹೆಚ್ಚು ಕಲಾವಿದರ ಹೆಸರುಗಳನ್ನು ಹಾಡಿನ ಸಾಹಿತ್ಯದಲ್ಲಿ ಬಳಸಿಕೊಳ್ಳಲಾಗಿದ್ದು ಕನ್ನಡ ಸಿನಿಮಾ ಕಲಾವಿದರ ಒಗ್ಗಟ್ಟನ್ನು ಬಿಂಬಿಸಲಾಗಿದೆ.
ಇಲ್ಲಿ ಆಸಕ್ತಿಕರ ವಿಷಯವೆಂದರೆ ಬಕಾಸುರ ಚಿತ್ರದ ಯಾವೊಬ್ಬ ನಟ-ನಟಿಯರು ಕೂಡ ಈ ಹಾಡಿನಲ್ಲಿಲ್ಲ. ಈ ಬಗ್ಗೆ ಚಿತ್ರದ ನಾಯಕ ಆರ್ ಜೆ ರೋಹಿತ್ ಹೇಳುವುದು ಹೀಗೆ: ನಮ್ಮ ಹಿಂದಿನ ಚಿತ್ರ ಕರ್ವದ ಸಮಯದಲ್ಲಿ ಈ ಆಲೋಚನೆ ನಮ್ಮ ಮನಸ್ಸಿಗೆ ಬಂತು. ಆ ಚಿತ್ರದಲ್ಲಿ ಯಾವುದೇ ಹಾಡುಗಳಲ್ಲಿ. ಈ ಬಾರಿ ನಮಗೆ ವಿಡಿಯೊ ಮಾಡಲು ಅವಕಾಶ ಸಿಕ್ಕಿದೆ. ಚಿತ್ರ ತಂಡದ ಯಾರೊಬ್ಬರು ಕೂಡ ಈ ಹಾಡಿನಲ್ಲಿಲ್ಲ. ನಾನು ರೇಡಿಯೊ ಜಾಕಿಯಾಗಿದ್ದಾಗ ಕನ್ನಡ ಚಿತ್ರರಂಗದ ಎಲ್ಲಾ ನಟ-ನಟಿಯರು ಹೇಳುತ್ತಿದ್ದರು, ನಮ್ಮಲ್ಲಿ ಯಾವುದೇ ಜಗಳಗಳು, ಭಿನ್ನಾಭಿಪ್ರಾಯಗಳಿಲ್ಲ, ಮಾಧ್ಯಮಗಳೇ ಅವುಗಳನ್ನು ಸೃಷ್ಟಿಸುವುದು ಎಂದು ಹೇಳುತ್ತಿದ್ದರು.ಇದೇ ವಿಷಯವನ್ನಿಟ್ಟುಕೊಂಡು ಕನ್ನಡ ಚಿತ್ರರಂದ ಒಗ್ಗಟ್ಟಾಗಿದೆ ಎಂಬುದನ್ನು ತೋರಿಸುವ ವಿಡಿಯೊ ಏಕೆ ಮಾಡಬಾರದು ಎನ್ನಿಸಿತು. ಎಲ್ಲಾ ಸ್ಟಾರ್ ನಟ-ನಟಿಯರು ಇರುವ ವಿಡಿಯೊ ಮಾಡಬೇಕೆನ್ನಿಸಿ ಮಾಡಿದೆವು ಎನ್ನುತ್ತಾರೆ.
ಹೊಸಬ ಮನ್ವರಿಶ್ ಎನ್ ಹಾಡಿಗೆ ಸಾಹಿತ್ಯ ಬರೆದಿದ್ದು ಅವನೀಶ್ ಪಿ ಸಂಗೀತ ಸಂಯೋಜಿಸಿದ್ದಾರೆ. ನಮಗಿರುವುದು ಒಂದೇ ಜೀವನ, ಒಂದೇ ದಿನ ನಾವೆಲ್ಲರೂ ಒಟ್ಟಾಗಿ ಒಬ್ಬರನ್ನೊಬ್ಬರು ಬೆಂಬಲಿಸೋಣ, ಅನಿಸಿದ್ದನ್ನು ಮಾಡೋಣ ಎಂಬ ಸಾಲುಗಳು ಹಾಡಿನಲ್ಲಿವೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ನಟ-ನಟಿಯರು, ಸಂಗೀತ ನಿರ್ದೇಶಕರು, ಹಾಡುಗಾರರು ಸೇರಿದಂತೆ 35 ಕಲಾವಿದರು ಈ ವಿಡಿಯೊದಲ್ಲಿದ್ದಾರೆ.ನಕುಲ್ ಎಂಬುವವರು ಇದನ್ನು ಹಾಡಿದ್ದಾರೆ.
ಕನ್ನಡದ ಪ್ರತಿಯೊಬ್ಬ ನಟ-ನಟಿಯರು ಕೂಡ ನಮ್ಮ ಯೋಜನೆಗೆ ಸಹಕರಿಸಿದ್ದಾರೆ ಎನ್ನುತ್ತಾರೆ ಆರ್ ಜೆ ರೋಹಿತ್.