ಸಂಗೀತಾ ಭಟ್ 
ಸಿನಿಮಾ ಸುದ್ದಿ

ವಾರಾಂತ್ಯದಲ್ಲಿ ಬ್ಯುಸಿಯಾಗಿರುವ ಸಂಗೀತಾ ಭಟ್

ಸಿನಿಮಾಗಳನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಅದುವರೆಗೆ ಅಷ್ಟೊಂದು ನಿಯಮ ಹಾಕಿಕೊಂಡಿರಲಿಲ್ಲ ನಟಿ...

ಸಿನಿಮಾಗಳನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಅದುವರೆಗೆ ಅಷ್ಟೊಂದು ನಿಯಮ ಹಾಕಿಕೊಂಡಿರಲಿಲ್ಲ ನಟಿ ಸಂಗೀತಾ ಭಟ್. ಇದೀಗ ನಿರ್ದೇಶಕ ಅಶ್ವತ್ ಸ್ಯಾಮುವೆಲ್ ನಿರ್ದೇಶನದ ಅಳಿದು ಉಳಿದವರು ಚಿತ್ರದ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ಸಂಗೀತಾ ಭಟ್ ತಮ್ಮ ಮುಂದಿನ ಚಿತ್ರದಲ್ಲಿ ಶೂಟಿಂಗ್ ಗೆ ವಾರಾಂತ್ಯದಲ್ಲಿ ಮಾತ್ರ ದಿನಾಂಕಗಳನ್ನು ನೀಡಬೇಕಾಗಿದೆ.
ಏಕೆ ಹೀಗೆ ಎಂದು ಕೇಳಿದಾಗ ಸಂಗೀತ ಭಟ್ ಅದಕ್ಕೆ ನಿರ್ದೇಶಕ ವೇಣುಗೋಪಾಲ್ ಕೆ ಕಾರಣ ಎನ್ನುತ್ತಾರೆ. ವೃತ್ತಿಯಲ್ಲಿ ಐಟಿ ಉದ್ಯೋಗಿಯಾಗಿರುವ ವೇಣುಗೋಪಾಲ್ ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಕೆಲವು ಕಲಾವಿದರನ್ನು ಒಗ್ಗೂಡಿಸಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇಲ್ಲಿ ಕಥೆ ತುಂಬಾ ಭಿನ್ನವಾಗಿದೆ ಎನ್ನುತ್ತಾರೆ ಸಂಗೀತಾ ಭಟ್.
ಈ ಚಿತ್ರದಲ್ಲಿ ಗಾರ್ಮೆಂಟ್ ಕೆಲಸದವರಾಗಿ ಸಂಗೀತಾ ಅಭಿನಯಿಸುತ್ತಿದ್ದು, ಈಕೆ ಕೆಳ ಮಧ್ಯಮ ವರ್ಗದಿಂದ ಬಂದವಳಾಗಿರುತ್ತಾಳೆ. ನನಗೆ ಈ ಪಾತ್ರ ತುಂಬಾ ಇಷ್ಟವಾಗಿ ವಾರಾಂತ್ಯದಲ್ಲಿಯಾದರೂ ಪರವಾಗಿಲ್ಲವೆಂದು ದಿನಾಂಕಗಳನ್ನು ನೀಡಿದೆ ಎನ್ನುತ್ತಾರೆ ಸಂಗೀತಾ.
ಫೆಬ್ರವರಿ ಮೊದಲ ವಾರದವರೆಗೆ ವಾರಾಂತ್ಯಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಕೂಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಕೊಲೆಯ ರಹಸ್ಯದ ಕಥೆಯನ್ನು ಚಿತ್ರ ಹೊಂದಿದ್ದು ಇದರಲ್ಲಿ ಪ್ರೀತಿ, ಪ್ರೇಮ ಕೂಡ ಇರುತ್ತದೆ. ನಾಯಕಿ ಪ್ರಧಾನ ಚಿತ್ರವಿದು. ಬಾಲು ಅವರು ನನಗೆ ನಾಯಕರಾಗಿ ಅಭಿನಯಿಸುತ್ತಿದ್ದಾರೆ ಎಂದು ಸಂಗೀತಾ ಭಟ್ ವಿವರಣೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!