ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ಕಿರಿಕ್ ಪಾರ್ಟಿ ಯಶಸ್ಸಿನ ನಂತರ, ಖುಷಿಯ ಅಚ್ಚರಿಗಳನ್ನು ನೀಡಲಿರುವ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣ ತಯಾರಾಗಿ ಬಿಡುಗಡೆಯಾಗಲು ...

ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣ ತಯಾರಾಗಿ ಬಿಡುಗಡೆಯಾಗಲು ಸ್ವಲ್ಪ ಸಮಯ ಹಿಡಿಯುತ್ತಿದ್ದರೂ ಕೂಡ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು, ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಇದೀಗ ಸ್ವತಃ ರಕ್ಷಿತ್ ಶೆಟ್ಟಿಯವರೇ ಮಾತನಾಡಿದ್ದು, ಕೊನೆಗೂ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಿದ್ದರಾಗಿದ್ದೇವೆ ಎನ್ನುತ್ತಾರೆ.
ಫೆಬ್ರವರಿ 10ರಂದು ಚಿತ್ರದ ಶೂಟಿಂಗ್ ಆರಂಭಿಸಲಿದ್ದೇವೆ. ಚಿತ್ರದ ಮುಹೂರ್ತ ಕೆಲ ದಿನಗಳ ಮೊದಲೇ ನಡೆಯಲಿದೆ. ಚಿತ್ರದ ಕಥೆ ಸಿದ್ಧವಾಗಿದ್ದು ಜೂನ್ ವರೆಗೆ ಶೂಟಿಂಗ್ ಸಾಗಲಿದೆ ಎಂದು ಮಾಹಿತಿ ನೀಡುತ್ತಾರೆ.
ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿರುವ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿದ ನಂತರ ಚಿತ್ರಕ್ಕೆ ಸಂಬಂಧಪಟ್ಟಂತೆ ಫೋಟೋಶೂಟ್ ನಡೆಯಲಿದೆ. ಕಳೆದ ವರ್ಷದಿಂದ ತೆರೆಯ ಮೇಲೆ ಕಡಿಮೆ ಕಾಣಿಸಿಕೊಂಡು ಅಭಿಮಾನಿಗಳಿಗೆ ನಿರಾಶೆ ಮಾಡಿರುವ ರಕ್ಷಿತ್ ಶೆಟ್ಟಿ ಈ ವರ್ಷ ಮೂರು ಸಿನಿಮಾಗಳನ್ನು ತಯಾರಿಸಲಿದ್ದಾರಂತೆ. ಅವನೇ ಶ್ರೀಮನ್ನಾರಾಯಣ ಮುಗಿದ ನಂತರ ಜುಲೈಯಲ್ಲಿ ಮತ್ತೊಂದು ಚಿತ್ರ ಹಾಗೂ ಮತ್ತೊಂದು ಪ್ರಾಜೆಕ್ಟ್ ವರ್ಷದ ಕೊನೆಗೆ ಇರಲಿದೆಯಂತೆ. ಈ ವರ್ಷವೇ ಮೂರೂ ಸಿನಿಮಾಗಳನ್ನು ತಯಾರಿಸುವ ಯೋಜನೆಯಿದೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ಕಳೆದೊಂದು ವರ್ಷದಲ್ಲಿ ಹಲವು ಬದಲಾವಣೆಗಳಾಗಿವೆ. ಕಿರಿಕ್ ಪಾರ್ಟಿಯ ಯಶಸ್ಸಿನ ಗುಂಗಿನಲ್ಲಿದ್ದೆವು. ನಂತರ ನನ್ನ ಮದುವೆ ನಿಶ್ಚಿತಾರ್ಥ ನಡೆಯಿತು. ಕಿರಿಕ್ ಪಾರ್ಟಿಯ ಯಶಸ್ಸಿನಲ್ಲಿ ಎಷ್ಟು ಭಾಗಿಯಾಗಿದ್ದೆವೆಂದರೆ ಮುಂದೆ ಯಾವ ಸಿನಿಮಾ ಮಾಡುವುದು ಎಂಬ ಯೋಚನೆ ಕೂಡ ಸ್ವಲ್ಪ ಸಮಯ ಮಾಡಿರಲಿಲ್ಲ. ಸುಮಾರು ಒಂದು ವರ್ಷ ಕಳೆದ ನಂತರವೇ ಮುಂದಿನ ಪ್ರಾಜೆಕ್ಟ್ ನ್ನು ನಾನು ಆರಂಭಿಸಿದ್ದು. ಇನ್ನು ಅದೇ ತಪ್ಪನ್ನು ನಾನು ಮಾಡುವುದಿಲ್ಲ. ಈ ವರ್ಷ ನಾನು ಬರವಣಿಗೆಗಿಂತ ಸಿನಿಮಾಗಳ ಅಭಿನಯದಲ್ಲಿ ಹೆಚ್ಚು ತೊಡಗುತ್ತೇನೆ ಎಂದರು.
ಜೂನ್ ವೇಳೆಗೆ ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಮುಗಿಸುವ ವಿಶ್ವಾಸ ಹೊಂದಿದ್ದಾರೆ ಅವರು. ಎಲ್ಲವೂ ಸಿದ್ಧವಾಗಿದ್ದು ಚಿತ್ರದ ಕಥೆ ಕೂಡ ಸುಂದರವಾಗಿದೆ. ಒಂದು ಬಾರಿ ಶೂಟಿಂಗ್ ಆರಂಭಗೊಂಡರೆ ಸರಾಗವಾಗಿ ಮುಗಿಯಬಹುದು ಎಂಬ ವಿಶ್ವಾಸವಿದೆ. ಈ ಹಿಂದಿನ ಚಿತ್ರಗಳಿಗೆ ನಾಲ್ಕು ತಿಂಗಳು ತೆಗೆದುಕೊಂಡಿದ್ದರೆ ಈ ಸಿನಿಮಾಕ್ಕೆ ಮತ್ತೆ ಒಂದು ತಿಂಗಳು ಹೆಚ್ಚು ಸಮಯ ತೆಗೆದುಕೊಳ್ಳಲಿದ್ದೇವೆ ಎಂದರು.
ಅವನೇ ಶ್ರೀಮನ್ನಾರಾಯಣದ ನಂತರ ಮುಂದಿನ ಚಿತ್ರ ಪ್ರೀತಿ, ಪ್ರಣಯದ ಕುರಿತ ಸಿನಿಮಾವಾಗಿದ್ದು ಮತ್ತೊಂದು ಸಿನಿಮಾ ಅತ್ಯಂತ ವಿಭಿನ್ನವಾಗಿರುತ್ತದೆ. ಅನೇಕ ವಿಷಯಗಳು ನನ್ನ ಮನಸ್ಸಿನಲ್ಲಿವೆ. ಅವೆಲ್ಲವೂ ಒಟ್ಟಾಗಿ ಸಿನಿಮಾ ರೂಪ ಪಡೆದುಕೊಳ್ಳಲಿದೆ ಎನ್ನುತ್ತಾರೆ.
ಈ ಮೂರು ಚಿತ್ರಗಳಲ್ಲಿ ಯಾವುದಾದರೊಂದಕ್ಕೆ ನಿರ್ದೇಶಕರಾಗುತ್ತೀರಾ ಎಂದು ಕೇಳಿದಾಗ, ಖಂಡಿತಾ ಮತ್ತೆ ನಿರ್ದೇಶನ ಮಾಡುವುದು ನನಗಿಷ್ಟ. ಆದರೆ ಈ ವರ್ಷ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel