ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಕೊಲೆ ಆರೋಪದ ಮೇಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Man Strangled To Death By Ex-Girlfriend's Husband in Bengaluru
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾಜಿ ಪ್ರೇಯಸಿಯ ಕರೆದಳು ಎಂದು ಆಕೆಯನ್ನು ಭೇಟಿ ಮಾಡಲು ಮನೆಗೆ ಹೋಗಿದ್ದ ಯುವಕನೋರ್ವ ಕೊಲೆಯಾಗಿರುವ ದಾರುಣ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನನ್ನು ರಾಮನಗರದ ಬಿಡಿ ಕಾಲೋನಿ ನಿವಾಸಿ ಮೊಹಮ್ಮದ್ ಖಾಸಿಂ(27) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇಲೆ ಮಾಜಿ ಪ್ರೇಯಸಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಸಂಬಂಧ ಬ್ಯಾಟರಯನಪುರ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Man Strangled To Death By Ex-Girlfriend's Husband in Bengaluru
ಅಕ್ರಮ ಸಂಬಂಧಕ್ಕೆ ಮೂವರು ಬಲಿ: ಪತ್ನಿ ಕೊಂದು ಪತಿ ಆತ್ಮಹತ್ಯೆ; ಮಹಿಳೆಯ ಪ್ರಿಯಕರನೂ ಸಾವಿಗೆ ಶರಣು!

ಅಷ್ಟಕ್ಕೂ ಆಗಿದ್ದೇನು?

ಮೊಹಮ್ಮದ್ ಖಾಸಿಂ ಹಾಗೂ ಬಂಧಿತ ಯುವತಿ ಕಳೆದ ನಾಲ್ಕು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಬೆಂಗಳೂರಿನ ಮತ್ತೊಬ್ಬ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. ಮೇ 25ರ ಸಂಜೆ ಮಾಜಿ ಪ್ರೇಯಸಿಯ ಕರೆಯ ಮೇರೆಗೆ ಆಕೆಯನ್ನು ಭೇಟಿ ಮಾಡಲು ಖಾಸಿಂ ಬ್ಯಾಟರಾಯನಪುರ ವ್ಯಾಪ್ತಿಯ ಶ್ಯಾಮಣ್ಣ ಗಾರ್ಡನ್‌ನಲ್ಲಿರುವ ಆಕೆಯ ಮನೆಗೆ ಹೋಗಿದ್ದಾನೆ.

ಈ ವೇಳೆ ಮನೆಯಲ್ಲಿ ಖಾಸಿಂ, ಪ್ರೇಯಸಿಯ ಪತಿ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆಕ್ರೋಶಗೊಂಡ ಯುವತಿಯ ಪತಿ ಹಾಗೂ ಆತನ ಕುಟುಂಬಸ್ಥರು ಮೊಹಮ್ಮದ್ ಖಾಸಿಂ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಖಾಸಿಂ ರಾಮನಗರದ ತನ್ನ ನಿವಾಸಕ್ಕೆ ತೆರಳಿ ಮಲಗಿದ್ದ. ಆದರೆ ಗಾಯದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಖಾಸಿಂ ಕೊನೆಯುಸಿರೆಳೆದಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com