ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ 
ಸಿನಿಮಾ ಸುದ್ದಿ

ರಾತ್ರೋರಾತ್ರಿ ನನ್ನನ್ನು ಸ್ಟಾರ್ ನಟಿಯಾಗುವಂತೆ ಮಾಡಿದ್ದರು ಕಾಶಿನಾಥ್: ಉಮಾಶ್ರೀ

ರಾತ್ರೋರಾತ್ರಿ ನಾನು ಸ್ಟಾರ್ ಆಗಲೂ ಕಾಶಿನಾಥ್ ಅವರೇ ಕಾರಣ ಎಂದು ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ...

ಬೆಂಗಳೂರು: ರಾತ್ರೋರಾತ್ರಿ ನಾನು ಸ್ಟಾರ್ ಆಗಲೂ ಕಾಶಿನಾಥ್ ಅವರೇ ಕಾರಣ ಎಂದು ನಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹೇಳಿದ್ದಾರೆ.
ಗುರು ಕಾಶಿನಾಥ್ ಅವರ ನಿಧನ ಹಿನ್ನಲೆಯಲ್ಲಿ ಅಂತಿಮ ದರ್ಶನ ಪಡೆಯುವ ಸಲುವಾಗಿ ಎನ್ಆರ್ ಕಾಲೋನಿಯಲ್ಲಿರುವ ಎಪಿಎಸ್ ಕಾಲೇಜು ಬಳಿ ಬಂದ ಉಮಾಶ್ರೀ ಅವರು, ಕಾಶಿನಾಥ್ ಅವರ ಪಾರ್ಥೀವ ಶರೀರ ನೋಡುತ್ತಿದ್ದಂತೆಯೇ ಭಾವುಕರಾದರು. 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶಿನಾಥ್ ಅವರೊಂದಿಗೆ ಅನುಭವ ಚಿತ್ರ ಮಾಡಿದ ಬಳಿಕವೂ ನಾನು ಅವರೊಂದಿಗೆ ಎರಡು ಚಿತ್ರಗಳನ್ನು ಮಾಡಿದ್ದೆ. ಆದರೂ, ಅನುಭವ ಚಿತ್ರ ರಾತ್ರೋರಾತ್ರಿ ನಾನು ಸ್ಟಾರ್ ನಟಿ ಆಗುವಂತೆ ಮಾಡಿತ್ತು ಎಂದು ಹೇಳಿದ್ದಾರೆ. 
ನಾನು ಸ್ಟಾರ್ ನಟಿ ಆಗಲು ಕಾರಣ ಕಾಶಿನಾಥ್ ಅವರೇ. ಅಭಿನಯಿಸುವಾಗ ಕಾಶಿನಾಥ್ ಅವರು ಭಾವುಕರಾಗುತ್ತಿದ್ದರು. ಕಣ್ಣುಗಳನ್ನು ಬಳಸಿಕೊಂಡು ಹೇಗೆ ನಟನೆ ಮಾಡಬೇಕೆಂಬುದನ್ನು ಕಾಶಿನಾಥ್ ಅವರು ಹೇಳಿಕೊಟ್ಟಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ಯಾರ ಮೇಲೂ ಕೂಗಾಡುತ್ತಿರಲಿಲ್ಲ. ಅಭಿನಯ ತೃಪ್ತಿ ಹಾಗೂ ಉತ್ತಮವಾಗಿ ಬರುವವರೆಗೂ ಯಾರೊಬ್ಬ ನಟ-ನಟಿಯರನ್ನೂ ಬಿಡುತ್ತಿರಲಿಲ್ಲ. ಕಾಶಿನಾಥ್ ವಿಶೇಷ ನಿರ್ದೇಶಕರಾಗಿದ್ದರು ಎಂದು ಹೇಳಿದ್ದಾರೆ. 
ಸಚಿವೆಯಾದ ಬಳಿಕ ಕಾಶಿನಾಥ್ ಅವರು ಕರೆ ಮಾಡಿ ನನಗೆ ಅಭಿನಂದಿಸಿದ್ದರು. ಇಡೀ ಚಿತ್ರರಂಗವೇ ನನಗೆ ಅಭಿನಂದನೆಗಳನ್ನು ಹೇಳಿತ್ತು. ಕಳೆದ 33 ವರ್ಷಗಳಿಂದ ಕಾಶಿನಾಥ್ ಅವರು ನನಗೆ ಗೊತ್ತು. ಅವರ ಅಗಲಿಕೆ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT