ನವದೆಹಲಿ: ವಿವಾದಕ್ಕೀಡಾಗಿರುವ ಪದ್ಮಾವತ್ ಚಿತ್ರ ಅತ್ಯಂತ ಕೆಟ್ಟ ಚಿತ್ರವಾಗಿದ್ದು, ಇದನ್ನು ಮುಸ್ಲಿಮರು ವೀಕ್ಷಣೆ ಮಾಡಬಾರದು ಎಂದು ಎಂಐಎಂ ಪಕ್ಷ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ರಜಪೂತ ರಾಣಿ ಪದ್ಮಾವತಿ ಮತ್ತು ದೊರೆ ಅಲ್ಲಾವುದ್ದೀನ್ ಖಲ್ಜಿ ನಡುವಿನ ಕಥಾ ಹಂದರವನ್ನು ಹೊಂದಿರುವ ಪದ್ಮಾವತ್ ಚಿತ್ರ ಅತ್ಯಂತ ಕೆಟ್ಟ ಚಿತ್ರವಾಗಿದ್ದು, ಇದೊಂದು ಬಕ್ವಾಸ್ ಚಿತ್ರ..ನಿಜಕ್ಕೂ ಇದೊಂದು ಕೆಟ್ಟ ಚಿತ್ರವಾಗಿದ್ದು, ದೇವರು ನಿಮ್ಮನ್ನು ಸೃಷ್ಟಿ ಮಾಡಿರುವುದು ಉತ್ತಮ ಜೀವನ ನಿರ್ವಹಣೆಗೆ..ಈ 2 ಗಂಟೆಗಳ ಕೆಟ್ಟ ಚಿತ್ರ ವೀಕ್ಷಣೆಗೆ ಅಲ್ಲ. ಒಳ್ಳೆಯ ವಿಚಾರಗಳು ಎಂದಿಗೂ ನೆನಪಿನಲ್ಲಿ ಉಳಿಯುತ್ತವೆ. ಆದರೆ ಇದೊಂದು ಅತ್ಯಂತ ಕೆಟ್ಟ ಚಿತ್ರವಾಗಿದ್ದು, ನಿಮ್ಮ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಒವೈಸಿ ಹೇಳಿದ್ದಾರೆ.
ಅಂತೆಯೇ ಈ ಕೆಟ್ಟ ಚಿತ್ರವನ್ನು ವೀಕ್ಷಣೆ ಮಾಡಿ ಪ್ರಮಾಣ ಪತ್ರ ನೀಡಲು ಪ್ರಧಾನಿ ನರೇಂದ್ರ ಮೋದಿ 12 ಮಂದಿಯ ಸಮಿತಿ ರಚಿಸಿದ್ದರೇ ಎಂದು ಪ್ರಶ್ನಿಸಿದ್ದು, 1540ರಲ್ಲಿ ಲೇಖಕ ಮಲ್ಲಿಕ್ ಮೊಹಮದ್ ಜಯಸಿ ಈ ಕಥೆಯನ್ನು ಬರೆದಿದ್ದರು. ಇದೊಂದನ್ನು ಹೊರತು ಪಡಿಸಿದರೆ, ಈ ಕಥೆಗೆ ಯಾವುದೇ ಐತಿಹಾಸಿಕ ನೆಲೆಯಾಗಲಿ ಅಥವ ಪೂರಕ ಸಾಕ್ಷ್ಯಾಧಾರಗಳಾಗಲಿ ಇಲ್ಲ. ಆದರೂ ಈ ಚಿತ್ರದ ಬಗ್ಗೆ ಅದೇಕೆ ಸರ್ಕಾರಗಳು ಅಷ್ಟು ಆಸ್ತಕ್ತಿ ವಹಿಸುತ್ತಿವೆ ಎಂದು ತಿಳಿಯುತ್ತಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರಗಳಿಗೆ ಟಾಂಗ್ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics