ಚೂರಿಕಟ್ಟೆ 
ಸಿನಿಮಾ ಸುದ್ದಿ

ಚೂರಿಕಟ್ಟೆ ಚಿತ್ರದಲ್ಲಿ ನಾಯಕನಿಗಿಂತ ಪಿಸ್ತೂಲ್ ಪಾತ್ರ ದೊಡ್ಡದು!

ಚೌಕಬಾರ ಎಂಬ ಕಿರು ಚಿತ್ರದ ಯಶಸ್ಸ ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಯಿತು. ಕಿರು ಚಿತ್ರಗಳು ತಂತ್ರಜ್ಞನರನ್ನು ಜನರಿಗೆ ಪರಿಚಯಿಸುತ್ತದೆ ಮತ್ತು...

ಚೌಕಬಾರ ಎಂಬ ಕಿರು ಚಿತ್ರದ ಯಶಸ್ಸ ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಯಿತು. ಕಿರು ಚಿತ್ರಗಳು ತಂತ್ರಜ್ಞನರನ್ನು ಜನರಿಗೆ ಪರಿಚಯಿಸುತ್ತದೆ ಮತ್ತು ಅವರಲ್ಲಿನ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ ಎಂದು ಚೂರಿಕಟ್ಟೆ ನಿರ್ದೇಶಕ ರಘು ಹೇಳಿದ್ದಾರೆ. 
ಕಿರು ಚಿತ್ರಗಳು ತನ್ನದೇ ಆದ ಮಿತಿಗಳನ್ನು ಹೊಂದಿದ್ದರೂ ಅದು ವಿಭಿನ್ನ ಪ್ರೇಕ್ಷಕರನ್ನು ತಲುಪಿತು. ಅದೃಷ್ಟವಶಾತ್ ಇದು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರಶಸ್ತಿಗಳನ್ನು ಗೆದ್ದಿದೆ. ಈ ಗುರುತು ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಪ್ರೇರಣೆಯಾಯಿತು ಎಂದು ರಘು ಹೇಳಿದ್ದಾರೆ. 
ಚೂರಿಕಟ್ಟೆ ಚಿತ್ರಕಥೆ ಆಸಕ್ತಿದಾಯಕ ಹಿನ್ನಲೆ ಹೊಂದಿದೆ. ಪಿಸ್ತೂಲ್ ಈ ಚಿತ್ರಕ್ಕೆ ಸ್ಕ್ರಿಫ್ಟ್ ಗೆ ಸ್ಫೂರ್ತಿ ನೀಡಿತು. ಚಿತ್ರದಲ್ಲಿ ಪ್ರವೀಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಪಿಸ್ತೂಲ್ ನಮ್ಮ ನಾಯಕನಿಗಿಂತ ದೊಡ್ಡ ಪಾತ್ರವಹಿಸಲಿದ್ದು ಚಿತ್ರದಲ್ಲಿನ ಪ್ರತಿ ಪಾತ್ರದ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದರು. 
ಚೂರಿಕಟ್ಟೆ ಟಿಂಬರ್ ಮಾಫಿಯಾ ಜಗತ್ತಿನ ಕುರಿತಾದ ಚಿತ್ರಕಥೆ ಹೊಂದಿದೆ ಮತ್ತು ಒಂದು ನಿಮಿಷದಲ್ಲಿ ಕೋಪದಿಂದ ಹೊರಬರುವ ನಿರ್ಧಾರಗಳಿಂದ ಜನರ ಜೀವನವು ಹೇಗೆ ಬದಲಾಗುತ್ತದೆ. ಇದು ಅವರ ಸುತ್ತಲಿರುವ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಥಳೀಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುತ್ತದೆ. ಚಿತ್ರವು ಚೂರಿಕಟ್ಟೆ ಎಂಬ ಸಣ್ಣ ಹಳ್ಳಿಯಲ್ಲಿದೆ. ಆದರೆ ಇದು ಭಯವನ್ನುಂಟು ಮಾಡುತ್ತದೆ ಎಂದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ರಘು ಹೇಳಿದ್ದಾರೆ. 
ಚೂರಿಕಟ್ಟೆ ಚಿತ್ರವನ್ನು ಎಸ್ ನಯಾಝುದ್ದೀನ್ ಮತ್ತು ಎಂ ತುಳಸಿರಾಮುಡು ಎಂಬುದು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರೇರಣ ಕಂಬಂ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJP ಸೋಲಿಸಲು ಮಾಸ್ಟರ್‌ ಪ್ಲ್ಯಾನ್; 84 ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣು, ನಾಳೆಯಿಂದ ‘Bharat Jodo-2’ ಅಭಿಯಾನ ಆರಂಭ..!

ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ: ‘ಆರ್ಥಿಕ ಹೊರೆ ಇದೆ, ಆದರೂ ನಿಭಾಯಿಸುತ್ತೇವೆ’; ರಾಜ್ಯ ಸರ್ಕಾರ..!

ಪಾಕಿಸ್ತಾನದಲ್ಲಿ SCO ಸಭೆ ಆರಂಭ; ಭಾರತ ಭಾಗಿ, 2027ರ ಶೃಂಗಸಭೆಗೆ ಸಿದ್ಧತೆ!

ಟ್ರಾಫಿಕ್ ಫೈನ್ ಬಾಕಿ ಉಳಿಸಿಕೊಂಡವರಿಗೆ ಬಿಗ್ ಶಾಕ್; ದಂಡ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್

'ಕರ್ನಾಟಕದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ': ಪ್ರಧಾನಿ ಭೇಟಿಗೆ ಸರ್ವಪಕ್ಷ ನಿಯೋಗಕ್ಕೆ ಸಿಎಂ ಡಿಕೆಶಿ ಮನವಿ