ಭಾವನಾ 
ಸಿನಿಮಾ ಸುದ್ದಿ

ಮದುವೆ ನಂತರ ಮತ್ತೆ ಬಣ್ಣ ಹಚ್ಚಲಿರುವ ಭಾವನಾ

ಮದುವೆ ನಂತರ ನಟಿಯರ ವೃತ್ತಿಜೀವನ ಕೊನೆಯಾಗುತ್ತದೆ ಎಂಬುದು ಸಾಮಾನ್ಯವಾದ ನಂಬಿಕೆ....

ಮದುವೆ ನಂತರ ನಟಿಯರ ವೃತ್ತಿಜೀವನ ಕೊನೆಯಾಗುತ್ತದೆ ಎಂಬುದು ಸಾಮಾನ್ಯವಾದ ನಂಬಿಕೆ. ಆದರೆ ಅದೊಂದು ಸುಳ್ಳು ನಂಬಿಕೆಯಷ್ಟೇ ಎಂದು ಬಹುಭಾಷಾ ನಟಿ ಭಾವನಾ ಸಾಬೀತುಪಡಿಸಿದ್ದಾರೆ. ಕನ್ನಡದ ನಿರ್ಮಾಪಕ ನವೀನ್ ಜೊತೆ ಕಳೆದ ವಾರವಷ್ಟೇ ಮದುವೆ ಮಾಡಿಕೊಂಡಿರುವ ಭಾವನಾ ಸಣ್ಣ ವಿರಾಮದ ನಂತರ ಮತ್ತೆ ತಮ್ಮ ಮೆಚ್ಚಿನ ನಟನಾ ವೃತ್ತಿಗೆ ಮರಳಲು ಯೋಚಿಸಿದ್ದಾರೆ. 
ಮದುವೆ ನಂತರ ಭಾವನಾ ಅವರ ಮೊದಲ ಪ್ರಾಜೆಕ್ಟ್ ಕನ್ನಡ ಚಿತ್ರವಾಗಿದ್ದು ಇನ್ಸ್ ಪೆಕ್ಟರ್ ವಿಕ್ರಮ್ ನಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ವಿಖ್ಯಾತ್ ಪ್ರೊಡಕ್ಷನ್ ನಡಿ ತಯಾರಾಗುತ್ತಿರುವ ಚಿತ್ರಕ್ಕೆ ನರಸಿಂಹ ಅವರ ನಿರ್ದೇಶನವಿದೆ. ನಾಯಕನಾಗಿ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಇಬ್ಬರೂ ಅಭಿನಯಿಸುತ್ತಿದ್ದಾರೆ.
ಚಿತ್ರತಂಡ ಇಂದು ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಿದೆ. ಫೆಬ್ರವರಿ 9ರಿಂದ ಆರಂಭವಾಗುವ ಎರಡನೇ ಹಂತದ ಚಿತ್ರೀಕರಣದಲ್ಲಿ ಭಾವನಾ ಜೊತೆಯಾಗಲಿದ್ದಾರೆ. ಹಲವು ನಾಯಕಿಯರನ್ನು ಪರಿಗಣಿಸಿದ ನಂತರ ಚಿತ್ರತಂಡ ಭಾವನಾ ಅವರ ಇತ್ತೀಚಿನ ಮಲಯಾಳಂ ಚಿತ್ರವೊಂದನ್ನು ನೋಡಿದ ನಂತರ ಅವರನ್ನೇ ಆಯ್ಕೆ ಮಾಡಿಕೊಂಡರಂತೆ.
ಪ್ರಜ್ವಲ್ ದೇವರಾಜ್ ಇಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದರೆ ನಾಯಕಿಗೆ ಎರಡು ತರಹದ ಪಾತ್ರವಿದೆ. ಭಾವನಾ ಅವರಲ್ಲಿ ಚಿತ್ರ ನಿರ್ದೇಶಕರು ಸೌಂದರ್ಯ ಮತ್ತು ಪ್ರತಿಭೆ ಎರಡೂ ಗುರುತಿಸಿದ್ದರಿಂದ ಆರಿಸಿದರಂತೆ. 
ಭಾವನಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಅಭಿನಯದ ಟಗರು ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಬೆಂಗಳೂರಿನ ಅದರಲ್ಲೂ ಕನ್ನಡದ ಸೊಸೆಯಾಗಿರುವ ಭಾವನಾ ಮದುವೆ ಬಳಿಕ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಅವರ ಅಭಿಮಾನಿಗಳಿಗೆ ಖುಷಿಯಲ್ಲದೆ ಮತ್ತಿನ್ನೇನು? 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!