ಮುಂಬೈ: ರೋಟರ್ಡಮ್ ಚಲನಚಿತ್ರೋತ್ಸವದ ಮೂಲಕ ಕನ್ನಡದ ಸಿನಿಮ ಬಳೆಕೆಂಪ ವರ್ಲ್ಡ್ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ಚಲನಚಿತ್ರೋತ್ಸವ ಬಳೆಕೆಂಪನಿಗೆ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ನಿರ್ಮಾಪಕ ವಿವೇಕ್ ಗೊಂಬರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಈರೇಗೌಡ ಚಿತ್ರಕಥೆ-ನಿರ್ದೇಶನ ಮಾಡಿದ್ದು, ಬಳೆಕೆಂಪ ಈರೇಗೌಡರ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಐಎಫ್ಎಫ್ಆರ್ ನಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿರುವ ಏಕೈಕ ಭಾರತೀಯ ಸಿನಿಮಾ ಬಳೆಕೆಂಪ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ವಿಮರ್ಶಕರು ಹಾಗೂ ಖರೀದಿದಾರರು ಸಿನಿಮಾವನ್ನು ವೀಕ್ಷಿಸಲಿದ್ದಾರೆ.
2013 ರಲ್ಲಿ ನಿರ್ಮಾಪಕರ ಲ್ಯಾಬ್ ಭಾಗವಾಗಿ ರೋಟರ್ಡಮ್ ಚಲನಚಿತ್ರೋತ್ಸವಕ್ಕೆ ತೆರಳಿದ್ದೆ, ಅಷ್ಟೇ ಅಲ್ಲದೇ 2015 ರಲ್ಲಿ ನನ್ನ ಹಿಂದಿನ ಚಿತ್ರದ ತಂಡದೊಂದಿಗೂ ಅಲ್ಲಿಗೆ ತೆರಳಿದ್ದೆ, ರೋಟರ್ಡಮ್ ಚಲನಚಿತ್ರೋತ್ಸವದ ಪರಿಚಯವಿದೆ. ಅಂತಾರಾಷ್ಟ್ರೀಯ ಹಾಗೂ ಭಾರತದ ಸಿನಿಮಾಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೋಟರ್ಡಮ್ ಬೆಂಬಲಿಸಿದೆ, ಈ ಚಲನಚಿತ್ರೋತ್ಸವದಲ್ಲಿ ಬಳೆಕೆಂಪ ಸಿನಿಮಾಗೂ ಅತ್ಯುತ್ತಮ ವೇದಿಕೆ ಸಿಗಲಿದೆ ಎಂದು ನಿರ್ಮಾಪಕ ವಿವೇಕ್ ಗೊಂಬರ್ ಹೇಳಿದ್ದಾರೆ.